ADVERTISEMENT

ಹಾಲಭಾವಿ ತಾಂಡಾದಲ್ಲಿ ವಾಂತಿ ಭೇದಿ ಉಲ್ಬಣ

50ಕ್ಕೂ ಮಂದಿಗೆ ವಾಂತಿ ಭೇದಿ: ತಿಳಿದು ಬಾರದ ಕಾರಣ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 13:52 IST
Last Updated 30 ಜುಲೈ 2024, 13:52 IST
ವಾಂತಿ ಭೇದಿಯಿಂದ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ಹಾಲಭಾವಿತಾಂಡಾದ ಜನರಿಗೆ ಚಿಕಿತ್ಸೆ ನೀಡಲಾಯಿತು
ವಾಂತಿ ಭೇದಿಯಿಂದ ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವ ಹಾಲಭಾವಿತಾಂಡಾದ ಜನರಿಗೆ ಚಿಕಿತ್ಸೆ ನೀಡಲಾಯಿತು   

ಲಿಂಗಸುಗೂರು: ತಾಲ್ಲೂಕಿನ ಹಾಲಭಾವಿತಾಂಡಾದಲ್ಲಿ ಎರಡು ದಿನಗಳಿಂದ ವಾಂತಿ ಭೇದಿ ಉಲ್ಬಣಗೊಂಡಿದ್ದು, ಮಕ್ಕಳು ಮತ್ತು ವೃದ್ಧರು ಸೇರಿ 50ಕ್ಕೂ ವಾಂತಿ ಭೇದಿಯಿಂದ ಬಳಲಿ ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಚಿಕಿತ್ಸೆಗೆ ದಾಖಲಾಗಿದ್ದಾರೆ. 

ಗೊರೆಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈ ತಾಂಡಾದ ಕೆಲ ಕುಟುಂಬಗಳಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಮಕ್ಕಳ ಸಂಖ್ಯೆಯೆ ಹೆಚ್ಚಾಗಿದ್ದರಿಂದ ಶಾಲಾ ಶಿಕ್ಷಕರು ಆತಂಕಗೊಂಡಿದ್ದಾರೆ. ಘಟನೆಗೆ ಕಾರಣ ಏನೆಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಮಂಗಳವಾರ ಸಾರ್ವಜನಿಕ ಆಸ್ಪತ್ರೆಯಲ್ಲಿ ಯೋಗೇಶ್ವರಿ (8), ದಿಲೀಪ್‍ (4), ಸುನಿತಾ (21), ಚಂದಮ್ಮ (44), ಜುಮ್ಮಾಬಾಯಿ (28), ಗೋಜಿಬಾಯಿ (72), ಕಮಲಾಬಾಯಿ (28), ನಂದೀಶ (14), ಪ್ರವೀಣಕುಮಾರ (5), ಶಿವಪ್ಪ (29), ವಿಠಲ (30), ರವಿ (20) ಚಿಕಿತ್ಸೆಗೆ ದಾಖಲಾಗಿದ್ದಾರೆ.

ADVERTISEMENT

 ‘ಹಾಲಭಾವಿತಾಂಡಾದಲ್ಲಿ ವಾಂತಿ ಭೇದಿ ಉಲ್ಬಣಿಸಿದ್ದು ನಿಜ. ಸದ್ಯ 12 ಪ್ರಕರಣಗಳು ವರದಿ ಆಗಿವೆ. ಭಾಗಶಃ ನಿಯಂತ್ರಣಕ್ಕೆ ಬಂದಿದ್ದು ಶಾಲೆಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಅಮರೇಶ ಪಾಟೀಲ ಮಾಕಾಪುರ ತಿಳಿಸಿದ್ದಾರೆ.

ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಾಲಭಾವಿತಾಂಡಾದ ಜನ

 ‘ಹಾಲಭಾವಿತಾಂಡಾದಲ್ಲಿ ವಾಂತಿಭೇದಿ ಉಲ್ಬಣಗೊಂಡಿದೆ. ನಮ್ಮ ಶಾಲೆಗೂ ಆ ಪ್ರಕರಣಗಳಿಗೂ ಸಂಬಂಧ ಇಲ್ಲ. ಮಾನವೀಯತೆ ದೃಷ್ಟಿಯಿಂದ ಶಾಲೆಯ ಕೊಠಡಿಗಳಲ್ಲಿ ತಾತ್ಕಾಲಿಕ ಆರೋಗ್ಯ ಸೇವೆಗೆ ಅವಕಾಶ ಕಲ್ಪಿಸಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೊಂಬಣ್ಣ ರಾಠೋಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.