ರಾಯಚೂರು: ಇಲ್ಲಿನ ರಾಯಚೂರು ವಿದ್ಯುತ್ ಶಾಖೋತ್ಪನ್ನ ಕೇಂದ್ರ (ಆರ್‌ಟಿಪಿಎಸ್)ದಲ್ಲಿ ವಾಟರ್ ಕ್ಲಾರಿಫೈರ್ ಸ್ವಚ್ಛಗೊಳಿಸುವಾಘ ವಿದ್ಯುತ್ ತಂತಿ ತಗುಲಿ ಕಾರ್ಮಿಕ ತಿಮ್ಮಾರೆಡ್ಡಿ (28) ಮೃತಪಟ್ಟಿದ್ದಾರೆ.ರಂಗಪ್ಪ ಹನುಮೇಶ ಮತ್ತು ವೀರೇಶ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಆರ್‌ಟಿಪಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
‘ಕೆಲಸದ ವೇಳೆ ಸುರಕ್ಷತಾ ಸಾಮಗ್ರಿ ನೀಡಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೇ ಕಾರ್ಮಿಕರ ಸಾವಿಗೆ ಕಾರಣ’ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.