ADVERTISEMENT

‘ಯೋಗ, ಧ್ಯಾನದಿಂದ ದೈಹಿಕ ಸದೃಢತೆ’

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 13:26 IST
Last Updated 29 ನವೆಂಬರ್ 2019, 13:26 IST
ರಾಯಚೂರು ತಾಲ್ಲೂಕಿನ ಕಲ್ಮಲಾ ಗ್ರಾಮದಲ್ಲಿ ಈಚೆಗೆ ’ಸಂವಿಧಾನ ದಿನಾಚರಣೆ ಹಾಗೂ ವಿಕಲಚೇತನರಿಗೆ ಮತ್ತು ಯುವಕರಿಗೆ ಆರೋಗ್ಯದ ಅರಿವು’ ಕಾರ್ಯಕ್ರಮ ಜರುಗಿತು
ರಾಯಚೂರು ತಾಲ್ಲೂಕಿನ ಕಲ್ಮಲಾ ಗ್ರಾಮದಲ್ಲಿ ಈಚೆಗೆ ’ಸಂವಿಧಾನ ದಿನಾಚರಣೆ ಹಾಗೂ ವಿಕಲಚೇತನರಿಗೆ ಮತ್ತು ಯುವಕರಿಗೆ ಆರೋಗ್ಯದ ಅರಿವು’ ಕಾರ್ಯಕ್ರಮ ಜರುಗಿತು   

ರಾಯಚೂರು: ಯುವ ಜನರು ನಿತ್ಯ ಜೀವನದಲ್ಲಿ ಯೋಗ ಮತ್ತು ಧ್ಯಾನ ಮಾಡಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಬೇಕು ಎಂದು ಜಿಲ್ಲಾ ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಾಜು ಭಾವಿಹಾಳ ಹೇಳಿದರು.

ಜಿಲ್ಲಾ ನೆಹರು ಯುವ ಕೇಂದ್ರ, ಯುವ ಸಬಲೀಕರಣ ಕ್ರೀಡಾ ಇಲಾಖೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಯುವ ಸ್ಪಂದನ, ವಿಕಲಚೇತನರ ಸಾಮಾಜಿಕ ಸೇವಾ ಸಂಸ್ಥೆ, ಡಾ.ಬಿ.ಆರ್ ಅಂಬೇಡ್ಕರ್‌ ಯುವ ಅಭಿವೃದ್ದಿ ಸಂಘ, ಗ್ರಾಮ ಪಂಚಾಯಿತಿ ಕಲ್ಮಲಾಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಈಚೆಗೆ ಕಲ್ಮಲಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ’ಸಂವಿಧಾನ ದಿನಾಚರಣೆ ಹಾಗೂ ವಿಕಲಚೇತನರಿಗೆ ಅರಿವು, ಯುವ ಸ್ಪಂದನ ಅರಿವು ಹಾಗೂ ಆರೋಗ್ಯದ ಅರಿವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ವಿಪಿನ್ ಕುಮಾರ ಮಾತನಾಡಿ, ದೇಶದಲ್ಲಿ ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು ಎಂಬುದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನದ ಮೂಲ ಆಶಯವಾಗಿದೆ ಎಂದರು.

ADVERTISEMENT

ಯುವ ಪರಿವರ್ತಕ ಟಿ ರಾಮಯ್ಯ ನಾಯಕ ಮಾತನಾಡಿ, ಸಂಬಂಧಗಳು, ಶಿಕ್ಷಣ,ಸಂವಹನ, ಸುರಕ್ಷತೆ, ಆರೋಗ್ಯ ಹಾಗೂ ಜೀವನ ಶೈಲಿ, ಲಿಂಗ ಮತ್ತು ಲೈಂಗಿಕತೆ 15 ರಿಂದ 35 ವಯಸ್ಸಿನ ಯುವಜನರಿಗೆ ಯಾವುದೇ ಸಮಸ್ಯೆಗಳಿಗೆ ಉಚಿತವಾಗಿ ಸಂಪನ್ಮೂಲ ವ್ಯಕ್ತಿಗಳಿಂದ ಸಲಹೆ, ಸೂಕ್ತ ಮಾರ್ಗದರ್ಶನ ಪಡೆಯುವಂತೆ ತಿಳಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಂಚಾಲಕ ಮಹ್ಮದ ಅಲಿ ವಿಕಲಚೇತನರಿಗೆ ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಳ್ಳಮ್ಮ ಸೇರಿದಂತೆ ಸರ್ವ ಸದಸ್ಯರು ಕರ ವಸೂಲಿಗಾರ ಮಲ್ಲಪ್ಪ, ಕರಿಯಪ್ಪ, ಅಚ್ಚೋಳಿ, ಭೀಮರಾಯ, ಈರಮ್ಮ, ತ್ರೀವೇಣಿ, ಶೇಶಮ್ಮ, ತಿರುಮಲೇಶ, ಪ್ರಾಥಮಿಕ ಆರೋಗ್ಯ ಅಧಿಕಾರಿಗಳು, ಅಂಗವಾಡಿ ಕಾರ್ಯಕರ್ತರು ಆಶ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.