ADVERTISEMENT

ರಾಯಚೂರು | ಮದುವೆ ನಿಶ್ಚಯ: ಯುವತಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2024, 15:57 IST
Last Updated 28 ಏಪ್ರಿಲ್ 2024, 15:57 IST

ಶಕ್ತಿನಗರ: ರಾಯಚೂರು ತಾಲ್ಲೂಕಿನ ಯರಮರಸ್ ದಂಡು ಗ್ರಾಮದಲ್ಲಿ ಮದುವೆ ನಿಶ್ಚಯವಾದ ಕಾರಣ ಜಿಗುಪ್ಸೆಗೊಂಡು ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುನೀತಾ (26) ಆತ್ಮಹತ್ಯೆ ಮಾಡಿಕೊಂಡವರು.

ಈಚೆಗೆ ಯುವತಿಯ ಮದುವೆ ನಿಶ್ಚಯವಾಗಿತ್ತು. ಯುವತಿ ಈಗಲೇ ನನಗೆ ಮದುವೆ ಬೇಡ. ನಾನು ಇನ್ನೂ ಓದಬೇಕು ಎನ್ನುತ್ತಿದ್ದರು. ಮದುವೆಯಾದ ನಂತರವೂ ಓದಬಹುದು ಎಂದು ಹೇಳಿ ಹಿರಿಯರು ಯುವತಿಯನ್ನು ಮದುವೆಗೆ ಒಪ್ಪಿಸಿದರು.

ADVERTISEMENT

ಸುನೀತಾ ಏ.26ರಂದು ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದರು. ವಾಪಸ್ ಬಂದು ಮನೆಯಲ್ಲಿ ಚಾಕುವಿನಿಂದ ಎದೆಭಾಗಕ್ಕೆ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತ ಸುನೀತಾರ ಅಣ್ಣ ರವಿಕುಮಾರ ಅವರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.