ADVERTISEMENT

ಅರಣ್ಯದ ಹಾದಿಯತ್ತ ಒಂಟಿ ಸಲಗದ ಪಯಣ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 8:06 IST
Last Updated 14 ಸೆಪ್ಟೆಂಬರ್ 2013, 8:06 IST

ರಾಮನಗರ: ಬಿಡದಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಬುಧವಾರ ಕಂಡು ಬಂದ ಒಂಟಿ ಸಲಗವನ್ನು ಹಂದಿಗುಂದಿ ಅರಣ್ಯ ಪ್ರದೇಶದಿಂದ ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ಹೋಗುವಂತೆ ಮಾಡಲಾಗಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ತಾಕತ್‌ ಸಿಂಗ್‌ ರಣಾವತ್‌ ತಿಳಿಸಿದ್ದಾರೆ.

ಅವರು ಪ್ರಜಾವಾಣಿಯೊಂದಿಗೆ ಮಾತನಾಡಿ, ‘ಅರಣ್ಯ ಇಲಾಖೆಯ ನಾಲ್ಕು– ಐದು ತಂಡ ಆನೆಯನ್ನು ಅಲ್ಲಿಂದ ಸಾಗಿಸುವ ಕಾರ್ಯಾ ಚರಣೆಯಲ್ಲಿ ತೊಡಗಿದೆ. ಬನ್ನೇರುಘಟ್ಟ ಅರಣ್ಯ ಹಾಗೂ ಕಗ್ಗಲೀಪುರದಿಂದಲೂ ನುರಿತರ ತಂಡ ಬಂದಿದ್ದು, ಆ ಸಿಬ್ಬಂದಿಯೂ ಕಾರ್ ಯಾಚ ರಣೆ ಯಲ್ಲಿ ನಿರತರಾಗಿದ್ದಾರೆ’ ಎಂದು ಅವರು ಹೇಳಿದರು.

‘ಈ ಸಲಗವನ್ನು ತೆಂಗಿನಕಲ್ಲು ಅರಣ್ಯದಿಂದ ಕಬ್ಬಾಳು ಹಾಗೂ ಸಾತನೂರು ಅರಣ್ಯ ಪ್ರದೇಶದ ಮೂಲಕ ಮುತ್ತತ್ತಿಗೆ ಕಳುಹಿಸುವ ಯೋಜನೆ ರೂಪಿಸಲಾಗಿದೆ’ ಎಂದು ಅವರು ಈ ವೇಳೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.