ADVERTISEMENT

ಅರಣ್ಯ ಇಲಾಖೆಯಿಂದ ಸಾಲು ಮರಗಳ ಹರಾಜು

​ಪ್ರಜಾವಾಣಿ ವಾರ್ತೆ
Published 21 ಜನವರಿ 2016, 9:54 IST
Last Updated 21 ಜನವರಿ 2016, 9:54 IST
ಕನಕಪುರ ತಾಲ್ಲೂಕಿನ ಸಾತನೂರು ಚನ್ನಪಟ್ಟಣ ರಸ್ತೆಯಲ್ಲಿರುವ ರಸ್ತೆಬದಿಯ ಮರಗಳನ್ನು ಅರಣ್ಯ ಇಲಾಖೆ ಅಧಿಕಾರಿ ರಾಮಕೃಷ್ಣಪ್ಪ ಹರಾಜು ಮಾಡಿದರು. ಹರಾಜಿನಲ್ಲಿ ಪಾಲ್ಗೊಂಡಿರುವ ಖರೀದಿದಾರರು
ಕನಕಪುರ ತಾಲ್ಲೂಕಿನ ಸಾತನೂರು ಚನ್ನಪಟ್ಟಣ ರಸ್ತೆಯಲ್ಲಿರುವ ರಸ್ತೆಬದಿಯ ಮರಗಳನ್ನು ಅರಣ್ಯ ಇಲಾಖೆ ಅಧಿಕಾರಿ ರಾಮಕೃಷ್ಣಪ್ಪ ಹರಾಜು ಮಾಡಿದರು. ಹರಾಜಿನಲ್ಲಿ ಪಾಲ್ಗೊಂಡಿರುವ ಖರೀದಿದಾರರು   

ಕನಕಪುರ: ತಾಲ್ಲೂಕಿನ ಸಾತನೂರು ಮತ್ತು ಚನ್ನಪಟ್ಟಣ ರಸ್ತೆ ಬದಿಯ ಸಾಲು ಮರಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಟಾವು ಮಾಡಲು ಹರಾಜು ಮಾಡಿದ ಘಟನೆ ಮಂಗಳವಾರ ನಡೆಯಿತು.

ಸಾತನೂರು–ಚನ್ನಪಟ್ಟಣ ಮಾರ್ಗದ ರಸ್ತೆಯನ್ನು ರಾಜ್ಯ ಹೆದ್ದಾರಿ ರಸ್ತೆಯನ್ನಾಗಿಸಿ ಮೇಲ್ದರ್ಜೆಗೇರಿಸಿದ್ದರಿಂದ ರಸ್ತೆ ಅಗಲೀಕರಣ ಮತ್ತು ಅಭಿವೃದ್ದಿಯಿಂದ ರಸ್ತೆಯ ಎರಡೂ ಬದಿಯಲ್ಲಿರುವ ಸುಮಾರು 103 ಮರಗಳನ್ನು ತೆಗೆಯಬೇಕೆಂದು ಲೋಕೋಪಯೋಗಿ ಇಲಾಖೆಯವರು ರಸ್ತೆ ಬದಿಯ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆಯವರಲ್ಲಿ ಮನವಿ ಅವರು ಮಾಡಿದ್ದರು.

ಕನಕಪುರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣಪ್ಪ,  ಸಾತನೂರು ವಲಯ ಅರಣ್ಯಾಧಿಕಾರಿ ವಿಜಯ್ ಕುಮಾರ್, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ರಾಜಶೇಖರ್, ರಾಜು ಅವರುಗಳು ಮಂಗಳವಾರ ಮೊದಲೇ ಗುರುತು ಮಾಡಿರುವ ವಿವಿಧ ಜಾತಿಯ 103 ಮರಗಳನ್ನು ಇರುವ ಸ್ಥಿತಿಯಲ್ಲೇ ಬಹಿರಂಗ ಹರಾಜು ಮಾಡಿದರು. 

ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 44 ಮಂದಿ  ಬಿಡ್ ದಾರರು ಭಾಗವಹಿಸಿದ್ದರು. ಮೊದಲನೆ ಹಂತದಲ್ಲಿ 49 ಮರಗಳನ್ನು ₹  2 ಲಕ್ಷದ 80 ಸಾವಿರಕ್ಕೆ, ಎರಡನೇ ಹಂತದಲ್ಲಿ  46 ಮರಗಳನ್ನು ₹ 2 ಲಕ್ಷದ 15 ಸಾವಿರುಗಳಿಗೆ ಹರಾಜು ಮಾಡಲಾಯಿತು. ಉಳಿದಂತ 8 ಮರಗಳನ್ನು ₹ 87 ಸಾವಿರಕ್ಕೆ ಹರಾಜು ಮಾಡಲಾಯಿತು, ಬಾಬು ಮತ್ತು ಅಸ್ಲಂ ಎಂಬುವವರು ಹರಾಜಿನಲ್ಲಿ ತಮಗೆ ಬೇಕಾದ ಮರಗಳನ್ನು ಖರೀದಿಸಿದರು.

ಅರಳಿ, ಆಲ, ಇಪ್ಪೆ, ಗುಲ್ಮೋರ್, ಹುಣಸೆ ಸೇರಿದಂತೆ ಇನ್ನಿತರೆ ಜಾತಿಯ ಮರಗಳನ್ನು ಹರಾಜು ಮಾಡಲಾಯಿತು. ರಸ್ತೆ ಅಗಲೀಕರಣ ಮಾಡಿ ಅಭಿವೃದ್ದಿ ಪಡಿಸಲು ಅಡ್ಡಿಯಾಗಿರುವ ರಸ್ತೆ ಬದಿ ಮರಗಳನ್ನು ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಮಾಡಿದ ಮನವಿ ಮೇರೆಗೆ ಎರಡು ಬದಿಯಲ್ಲಿ ಗುರುತು ಮಾಡಿದ ಮರಗಳನ್ನು ಇರುವ ಸ್ಥಿತಿಯಲ್ಲೇ ಹರಾಜು ಮಾಡಲಾಗುತ್ತಿದೆ ಎಂದು ರಾಮಕೃಷ್ಣಪ್ಪ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕನಕಪುರ ಅವರು ತಿಳಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.