ADVERTISEMENT

`ಆರ್ಥಿಕ ಸದೃಢತೆಗೆ ಹೈನುಗಾರಿಕೆ ಸಹಕಾರಿ'

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 9:48 IST
Last Updated 1 ಜುಲೈ 2013, 9:48 IST

ಕನಕಪುರ: `ಹೈನುಗಾರಿಕೆಯನ್ನು ಆಶ್ರಯಿಸಿರುವ ರೈತರು ಆರ್ಥಿಕವಾಗಿ ಸದೃಢರಾಗಿದ್ದಾರೆ' ಎಂದು ಬೆಂಗಳೂರು ಡೇರಿ ನಿರ್ದೇಶಕ ಡಿ.ನಟೇಶ್ ಹೇಳಿದರು.

ಕಸಬಾ ಹೋಬಳಿ ಗಡಸಳ್ಳಿ ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಸ್ವಂತ ಕಟ್ಟಡ ನಿರ್ಮಾಣದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, `ತಾಲ್ಲೂಕಿನಲ್ಲಿ ಹೈನುಗಾರಿಕೆ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಹಾಗೆಯೇ ಹೊಸ ಸಂಘಗಳು ಅಸ್ತಿತ್ವಕ್ಕೆ ಬರುತ್ತಿವೆ' ಎಂದರು.

ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಲಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ ಹೈನುಗಾರಿಕೆಯನ್ನು ಪ್ರೋತ್ಸಾಹಿಸಿ ಒಕ್ಕೂಟವನ್ನು ಅಭಿವೃದ್ಧಿ ಪಡಿಸಬೇಕು ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಚನ್ನೇಗೌಡ, ಬೆಂಗಳೂರು ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಮಂಜುಳಾ, ಕಾರ್ಯದರ್ಶಿ ವೀರಭದ್ರಯ್ಯ, ಟೆಸ್ಟರ್ ಎಸ್.ಶಿವಪ್ಪ, ಚಿಕ್ಕತಾಯಮ್ಮ, ನಿರ್ದೇಶಕರಾದ ಕೆ.ಆರ್.ಶಿವಶಂಕರ್‌ರೆಡ್ಡಿ, ಚನ್ನಪ್ಪ, ಶಿವಪ್ಪರೆಡ್ಡಿ, ಶಂಕರರೆಡ್ಡಿ, ಕಾಲ್ಯಾ ನಾಯ್ಕ, ಜಯಮ್ಮ, ನಾಗರಾಜು, ಗ್ರಾಮದ ಮುಖಂಡರಾದ ರಾಮರೆಡ್ಡಿ, ಬಡೇಗೌಡ, ಸಿದ್ದೇಗೌಡ, ಅಪ್ಪಾಜಿ, ಸಿದ್ದೇಗೌಡ, ನಾಗೇಶ್, ನಾಗರಾಜು ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.