ADVERTISEMENT

ಉತ್ತಮ ವ್ಯಕ್ತಿತ್ವ: ವಿದ್ಯಾರ್ಥಿಗಳಿಗೆ ಕರೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2016, 9:50 IST
Last Updated 21 ಜನವರಿ 2016, 9:50 IST
ಮಾಗಡಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕ ಮಂಜುನಾಥ್‌ ಮಾತನಾಡಿದರು
ಮಾಗಡಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕ ಮಂಜುನಾಥ್‌ ಮಾತನಾಡಿದರು   

ಮಾಗಡಿ: ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರಂತಹ ಆದರ್ಶ ಪುರುಷರ ಜೀವನ ಚರಿತ್ರೆಗಳನ್ನು ಆಳವಾಗಿ ಅಧ್ಯಯನ ಮಾಡುವುದರಿಂದ ಉತ್ತಮ ವ್ಯಕ್ತಿತ್ವ ರೂಪಿಸಿ ಕೊಳ್ಳಲು ಮುಂದಾಗ ಬೇಕು ಎಂದು ಆಂಗ್ಲ ಭಾಷಾ ಪ್ರಾಧ್ಯಾಪಕ ಮಂಜುನಾಥ್‌ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತ ದೇಶದ ಯುವ ಜನತೆಯ ಶ್ರಮ ಜೀವನದ ಗುಣಾತ್ಮಕ ವ್ಯಕ್ತಿತ್ವವೇ ಭಾರತದ ಜೀವಾಳವಾಗಿದೆ ಎಂದರು.

ಪ್ರಾಂಶುಪಾಲ ಪ್ರೋ.ಎ.ಎಚ್‌. ಪಾರೂಕಿ ಅಧ್ಯಕ್ಷತೆವಹಿಸಿದ್ದರು. ಪ್ರೊ, ಜಗದೀಶ ನಡುವಿನ ಮಠ, ಪ್ರೊ.ಅನಿಲ್‌ ಕುಮಾರ್‌ ಪ್ರೊ.ನಂಜುಂಡ, ಪ್ರೊ.ಭಾಸ್ಕರ್‌, ಪ್ರೊ.ಮಂಚಯ್ಯ, ಪ್ರೊ. ವೀಣಾ, ಪ್ರೊ.ಸುಷ್ಮಾಮ ಪ್ರೊ.ಚಂದ್ರಪ್ರಭ, ಪ್ರೋ ವೀಣಾ. ಎಂ.ಜಿ. ದೈಹಿಕ ಶಿಕ್ಷಣ ನಿರ್ದೇಶಕ ರಮೇಶ್‌ ಬಾಬು, ಸ್ವಾಮಿ ವಿವೇಕಾನಂದರ ಆದರ್ಶಗಳು ಮತ್ತು ಯುವಜನತೆ ಕುರಿತು ಮಾತನಾಡಿದರು.

ಚರ್ಚಾಸ್ಪರ್ದೇ, ಪ್ರಬಂಧ ಸ್ಪರ್ಧೇಯಲ್ಲಿ ವಿಜೇತರಾದ ಮಾರುತಿ ಮೋಹನ್‌, ವನಿತ, ಪಿ, ನಯನ, ನಾಗವೇಣಿ, ರಂಜಿತ್‌, ದೀಪಿಕ, ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಅಶ್ವಿನಿ, ಹರ್ಷಿತಾ ಗೀತೆಗಳನ್ನು ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.