ADVERTISEMENT

ಕಲ್ಯಾಣಮಂಟಪ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 9:15 IST
Last Updated 30 ನವೆಂಬರ್ 2017, 9:15 IST

ಮಾಗಡಿ: ಮಾನವ ಸೇವಾ ಕಾರ್ಯಗಳು ಅನಾಧಿಕಾಲದಿಂದಲೂ ನಡೆದು ಬಂದಿವೆ. ಸೇವೆ ದೇವರ ಪೂಜೆಗೆ ಸಮ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು.

ಹನುಮಾಪುರ–ಮೋಟೇಗೌಡನ ಪಾಳ್ಯದ ನಡುವಿನ ಬೆಟ್ಟದ ಮೇಲಿರುವ ಮಹದೇಶ್ವರ ಸ್ವಾಮಿ ದೇಗುಲದ ಟ್ರಸ್ಟ್‌ ವತಿಯಿಂದ ₹1.20 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವು ಕಲ್ಯಾಣಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

‘ಮಹದೇಶ್ವರ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ನಡೆಯುತ್ತಿರುವ ಸಮಾಜಸೇವಾ ಕಾರ್ಯಗಳಿಗೆ ನಮ್ಮ ತಾಯಿ ತಂದೆಯ ಹೆಸರಿನಲ್ಲಿ ದನಸಹಾಯ ಮಾಡುವುದಾಗಿ ಶಾಸಕರು ತಿಳಿಸಿದರಲ್ಲದೆ, ಸಾರ್ವಜನಿಕರು ಸಹಾಯಹಸ್ತ ಚಾಚಬೇಕು’ ಎಂದರು.

ADVERTISEMENT

ಮಹದೇಶ್ವರ ಸ್ವಾಮಿ ಟ್ರಸ್ಟ್‌ ಅಧ್ಯಕ್ಷ ರಂಗಸ್ವಾಮಿ, ಖಜಾಂಚಿ ಶಿಕ್ಷಕ ನಾಗರಾಜು, ಟ್ರಸ್ಟಿಗಳಾದ ಜಯರಂಗಯ್ಯ, ಎಂ.ಆರ್‌.ರಂಗಸ್ವಾಮಿ, ಮಲ್ಲಿಕಾರ್ಜುನಯ್ಯ, ಚಿಕ್ಕಣ್ಣ, ಶಂಕರ್‌, ಶ್ರೀನಿವಾಸ್‌, ಪುಟ್ಟಸ್ವಾಮಿ, ಗೌಡಯ್ಯ ಇದ್ದರು, ಹನುಮಾಪುರ, ಮೋಟೇಗೌಡನ ಪಾಳ್ಯ, ಚನ್ನಮ್ಮನಪಾಳ್ಯ, ಸುತ್ತಲಿನ ಭಕ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.