ADVERTISEMENT

ಕಾಡುಗೊಲ್ಲರು ಮುಖ್ಯವಾಹಿನಿಗೆ ಬರಲಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 4:25 IST
Last Updated 19 ಅಕ್ಟೋಬರ್ 2012, 4:25 IST

ಮಾಗಡಿ:  ಕಾಡುಗೊಲ್ಲ ಸಮುದಾಯವು ಕೆಲವು ಸಂಪ್ರದಾಯಗಳಿಂದ ಹೊರಬಂದು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಕರೆ ನೀಡಿದರು.

ಅವರು ತಾಲ್ಲೂಕಿನ ಸಾವನದುರ್ಗದ ತಪ್ಪಲಿನ ಕೆ.ಜಿ. ಪೋಲೋಹಳ್ಳಿಯ ಕಾಡುಗೊಲ್ಲರ ವಿನಾಯಕ ಜನಪದ ಕಲೆ ಮತ್ತು ಸಾಂಸ್ಕೃತಿಕ ಬಳಗದ ವತಿಯಿಂದ ನಡೆದ 10ನೇ ವಿನಾಯಕ ವಾರ್ಷಿಕೋತ್ಸವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಪಂಚಾತಿ ಅಧ್ಯಕ್ಷ ಕೆ.ಮುದ್ದುರಾಜ್ ಯಾದವ್ ಮಾತನಾಡಿ, ಜಿಲ್ಲಾ ಪಂಚಾಯ್ತಿ ವತಿಯಿಂದ ಗೊಲ್ಲ ಮತ್ತು  ಹಿಂದುಳಿದ ಸಮುದಾಯಗಳ ಪ್ರಗತಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು.

ಬಿಬಿಎಂಪಿ ಸದಸ್ಯ ರಾಜಣ್ಣ, ತಿರುಮಲ ಕನ್ನಡ ಕೂಟದ ಸಂಚಾಲಕ ತಿರುಮಲ ಶ್ರೀನಿವಾಸ್ ಮಾತನಾಡಿದರು.
ಜಿ.ಪಂ. ಸದಸ್ಯ ವಿಜಯ ಕುಮಾರ್, ಗೊಲ್ಲ ಸಮುದಾಯದ ಮುಖಂಡರಾದ ಗ್ರಾ.ಪಂ. ಮಾಜಿ ಸದಸ್ಯ ಕೆಂಚಪ್ಪ, ಶಿವಣ್ಣ, ಬಳಗದ ಅಧ್ಯಕ್ಷ ಜೆ.ಕುಮಾರ್, ಉಪಾಧ್ಯಕ್ಷ ದೊಳ್ಳಯ್ಯ, ಪ್ರಧಾನ ಕಾರ್ಯದರ್ಶಿ ಶಿವಲಿಂಗಯ್ಯ ಅವರು, ಗೊಲ್ಲ ಸಮುದಾಯದ ಸಂಘಟನೆ,ಅಭಿವೃದ್ಧಿ ಕುರಿತು ಮಾತನಾಡಿದರು.

 ಗ್ರಾ.ಪಂ. ಉಪಾಧ್ಯಕ್ಷ ಪ್ರಕಾಶ್, ತಿಮ್ಮಯ್ಯ, ರಂಗೇಗೌಡ, ಬಳಗದ ಕಾರ್ಯದರ್ಶಿ ಕೆ.ಜಯಣ್ಣ, ಖಜಾಂಚಿ ಎನ್.ಶಿವಣ್ಣ, ಸಹಕಾರ್ಯದರ್ಶಿ ಜೆ. ಗಿರೀಶ್, ಬಸವೇನಹಳ್ಳಿ ಜಯರಾಮು, ಬಾಲಿಚಿಕ್ಕಣ್ಣ, ಗುದ್ದಲ ಹಳ್ಳಿ ಗೊಲ್ಲರ ಹಟ್ಟಿಯ ಸುರೇಶ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು. ಇದೇ ವೇಳೆ ಶತಾಯುಷಿ ಪೂಜಾರಿ ಚಿಕ್ಕಣ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಪೂಜಾರಿತಮ್ಮಯ್ಯ ಸ್ವಾಗತಿಸಿದರು. ಶಿಕ್ಷಕ ಮಾರಣ್ಣ ನಿರೂಪಿಸಿ ವಂದಿಸಿದರು. ರಸಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.