ADVERTISEMENT

ತೆರೆದ ಮ್ಯಾನ್‌ಹೋಲ್‌ ಗುಂಡಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 7:17 IST
Last Updated 22 ಅಕ್ಟೋಬರ್ 2017, 7:17 IST
ತೆರೆದುಕೊಂಡಿರುವ ಒಳಚರಂಡಿ ಮ್ಯಾನ್‌ಹೋಲ್‌ ಗೆ ಗಿಡವನ್ನು ಸಿಲುಕಿಸಲಾಗಿದೆ
ತೆರೆದುಕೊಂಡಿರುವ ಒಳಚರಂಡಿ ಮ್ಯಾನ್‌ಹೋಲ್‌ ಗೆ ಗಿಡವನ್ನು ಸಿಲುಕಿಸಲಾಗಿದೆ   

ಕನಕಪುರ: ನಗರದ ಪುರ ಪೊಲೀಸ್‌ ಠಾಣೆ ಮುಂಭಾಗದ ರಸ್ತೆಯ ತಿರುವಿನಲ್ಲಿ ಒಳಚರಂಡಿ ಮ್ಯಾನ್‌ಹೋಲ್‌ ಗುಂಡಿಯ ಬಾಯಿ ತೆರೆದುಕೊಂಡಿರುವುದರಿಂದ ಸಾರ್ವಜನಿಕರ ಓಡಾಡಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ.

ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕಾಮಗಾರಿ ಪ್ರಾರಂಭಗೊಂಡು ಸುಮಾರು 15 ವರ್ಷಗಳು ಕಳೆಯುತ್ತಿದ್ದರೂ ಇನ್ನೂ ಪೂರ್ಣಗೊಂಡಿಲ್ಲ, ಅತ್ಯಂತ ಕಳಪೆಮಟ್ಟದಲ್ಲಿ ಕಾಮಗಾರಿ ಮಾಡಿರುವುದರಿಂದ ಇಂತಹ ಅವ್ಯವಸ್ಥೆ ಆಗುತ್ತಿದೆ ಎಂದು ದೂರಿದ್ದಾರೆ.

ಮ್ಯಾನ್‌ಹೋಲ್‌ಗಳು ಆಗಾಗ ತೆರೆದುಕೊಳ್ಳುತ್ತವೆ, ಮುಚ್ಚಳ ಕುಸಿದು ಬೀಳುತ್ತವೆ. ಇಲ್ಲವಾದಲ್ಲಿ ಗಲೀಜು ನೀರು ಮ್ಯಾನ್‌ಹೋಲ್‌ಗಳಲ್ಲಿ ಉಕ್ಕಿ ಹರಿಯುತ್ತದೆ, ನಗರ ವ್ಯಾಪ್ತಿಯಲ್ಲಿ ನಿರಂತರವಾಗಿ ಇಂತಹ ಸಮಸ್ಯೆ ನಡೆಯುತ್ತಿವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

10 ದಿನಗಳ ಹಿಂದೆ ಮ್ಯಾನ್‌ಹೋಲ್‌ ಗುಂಡಿಯು ತೆರೆದುಕೊಂಡು ವಾಹನ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದೆ. ಆದರೂ ನಗರಸಭೆ ದುರಸ್ತಿ ಮಾಡಿಸಿಲ್ಲ ಎಂದು ದೂರಿದ್ದಾರೆ. ಕೂಡಲೇ ಇದನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.