ADVERTISEMENT

ತ್ಯಾಗದೆರೆ ಪಾಳ್ಯ: ನೀರಿಗೆ ಬರ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 19:30 IST
Last Updated 22 ಫೆಬ್ರುವರಿ 2012, 19:30 IST

ಮಾಗಡಿ: ತಾಲ್ಲೂಕಿನ ತ್ಯಾಗದೆರೆ ಪಾಳ್ಯದಲ್ಲಿ ಕುಡಿಯುವ ನೀರಿಗೆ ತುಂಬಾ ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಗ್ರಾಮಸ್ಥರು ದೂರದ ತೋಟಗಳಿಗೆ ಹೋಗಿ ಕೊಳವೆ ಬಾವಿಗಳಿಂದ ನೀರು ತರಬೇಕಿದೆ. ವಿದ್ಯುತ್ ಕಡಿತದ ಕಾರಣ ತೋಟದ ಮಾಲೀಕರು ಕುಡಿಯುವ ನೀರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ತಾಲ್ಲೂಕು ಆಡಳಿತ ತ್ಯಾಗದೆರೆ ಪಾಳ್ಯದ ಜನತೆಗೆ ಕುಡಿಯುವ ನೀರು ಒದಗಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವಿಗ್ರಹ ಪ್ರತಿಷ್ಠಾಪನೆ ಫೆ. 24ಕ್ಕೆ: ತಾಲ್ಲೂಕಿನ ಶ್ರೀಪತಿಹಳ್ಳಿಯ  ದೇವರಹಟ್ಟಿಯಲ್ಲಿರುವ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ರಾಜಗೋಪುರದ ದ್ವಾರಪಾಲಕರ ಜಯ-ವಿಜಯರ ವಿಗ್ರಹಗಳ  ಪ್ರತಿಷ್ಠಾಪನೆ ಫೆ.24 ಮತ್ತು25 ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.