ADVERTISEMENT

ದಲಿತರ ಮೇಲೆ ದೌರ್ಜನ್ಯ–ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 10:33 IST
Last Updated 20 ಸೆಪ್ಟೆಂಬರ್ 2013, 10:33 IST

ಕನಕಪುರ: ತಾಲ್ಲೂಕಿನಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ ಎಂದು ಆರೋಪಿಸಿ ಸರ್ವಜನ ಸಮಾಜ ವೇದಿಕೆ ಕಾರ್ಯಕರ್ತರು ಗುರುವಾರ ತಾಲ್ಲೂಕು ಕಚೆೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ದೌರ್ಜನ್ಯ ಪ್ರಕರಣಗಳನ್ನು ತಡೆಯುವಲ್ಲಿ ವಿಫಲರಾಗಿರುವ ಸರ್ಕಲ್‌ ಇನ್‌ಸ್ಪೆಕ್ಟರ್‌ ವಿ.ಧನಂಜಯ ಮತ್ತು ಪಿ.ಎಸ್.ಐ ಹೇಮಂತ ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜೆ.ಎಂ.ಶಿವಲಿಂಗಯ್ಯ ಮಾತನಾಡಿ, ‘ಕಸಬಾ ಹೋಬಳಿ ಎಚ್.ಕೊತ್ತ ನೂರು, ಉಯ್ಯಂಬಳ್ಳಿ ಹೋಬಳಿ ಏಳಗಳ್ಳಿ, ಕೋಡಿಹಳ್ಳಿ ಹೋಬಳಿ ವರ್ತಿಪುರ ಗ್ರಾಮಗಳಲ್ಲಿ ಸವರ್ಣೀ ಯರು ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ನಡೆಸಿ ಅನ್ಯಾಯ ವೆಸಗಿದ್ದಾರೆ. ಆದರೆ ಇಲ್ಲಿ ಕಾನೂನು ಕಾಪಾಡಿ ದಲಿತರಿಗೆ ರಕ್ಷಣೆ ನೀಡ ಬೇಕಾದ ಸರ್ಕಲ್‌ ಇನ್‌ಸ್ಪೆಕ್ಟರ್‌ ವಿ.ಧನಂಜಯ ಮತ್ತು ಪಿ.ಎಸ್‌.ಐ. ಹೇಮಂತ ಆರೋಪಿಗಳೊಂದಿಗೆ ಕೈಜೋಡಿಸಿದ್ದಾರೆ’ ಎಂದು ಆರೋಪಿಸಿದರು.

‘ಅನ್ಯಾಯಕ್ಕೆ ಒಳಗಾದವರಿಗೆ ರಕ್ಷಣೆ ನೀಡುವ ಬದಲು ದಲಿತರ  ವಿರುದ್ಧವೇ ಗಂಭೀರ ಸ್ವರೂಪದ ಕೇಸುಗಳನ್ನು ದಾಖಲಿಸಿ ದಲಿತರ ದನಿಯನ್ನು ಅಡಗಿಸಲಾಗುತ್ತಿದೆ. ಸವರ್ಣಿಯರು ದಲಿತರ ಜಮೀನನ್ನು ಅತಿಕ್ರಮಿಸಲು ಪರೋಕ್ಷವಾಗಿ ಬೆಂಬಲ ನೀಡ ಲಾಗುತ್ತಿದೆ ಎಂದು ದೂರಿದರು.

‘ವರ್ತಿಪುರ ಗ್ರಾಮದಲ್ಲಿ ದಲಿತರಿಗೆ ಸೇರಿದ ಸ್ಮಶಾನದಲ್ಲಿ ಅಕ್ರಮವಾಗಿ ಮರಳು ಫಿಲ್ಟರ್ ಘಟಕದ ಚಟುವಟಿಕೆ ನಡೆಸಲಾಗುತ್ತಿದೆ. ಈ ಗ್ರಾಮದಲ್ಲಿ ದಲಿತರ ಮೇಲೆ ಏಕಾಏಕಿ ಮಾರಾ ಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ.  ಮಹಿಳೆಯರ ಮೇಲೂ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಲಾಗಿದೆ. ಆದರೂ ಅವರಿಗೆ ಸೂಕ್ತ ರಕ್ಷಣೆ ಒದಗಿಸಿಲ್ಲ’ ಎಂದು ದೂರಿದರು.

‘ತಾಲ್ಲೂಕಿನಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಂದ ಇಲ್ಲಿನ ದಲಿತರು ಪ್ರಾಣಭಯದಿಂದ ಬದುಕುವಂತಾಗಿದೆ. ಗಂಭೀರ ಸ್ವರೂ ಪದ ದೌರ್ಜನ್ಯಗಳು ನಡೆಯು ತ್ತಿದ್ದರೂ ಜಿಲ್ಲಾ ಪೋಲಿಸ್ ವರಿಷ್ಠಾ ಧಿಕಾರಿ ಮತ್ತು ಜಿಲ್ಲಾಧಿಕಾರಿ ಅನ್ಯಾಯ ಕ್ಕೊಳಗಾದ ದಲಿತರಿಗೆ ರಕ್ಷಣೆ ನೀಡಿ ನ್ಯಾಯ ಒದಗಿಸುತ್ತಿಲ್ಲ’ ಎಂಬ ದೂರನ್ನು ತಹಶೀಲ್ದಾರ್‌ ಅವರಿಗೆ ಸಲ್ಲಿಸಿದರು.

ಳಗಳ್ಳಿ ಶಿವ, ಆಲನಾಥ ರೇಣುಕ, ಶ್ರೀನಿವಾಸ್, ಜಗದೀಶ್, ಶಿವಲಿಂಗಯ್ಯ ಸೇರಿದಂತೆ ನೂರಾರು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.