ADVERTISEMENT

ವೈಯಕ್ತಿಕ ದ್ವೇಷ: ರಾಗಿ ಹೊಲಕ್ಕೆ ವಿಷ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 4:25 IST
Last Updated 19 ಅಕ್ಟೋಬರ್ 2012, 4:25 IST

ಮಾಗಡಿ: ವೈಯಕ್ತಿಕ ದ್ವೇಷದಿಂದ ರೈತರೊಬ್ಬರ ರಾಗಿ ಮತ್ತು ತೊಗರಿ ಹೊಲಕ್ಕೆ ವಿಷ ಸಿಂಪಡಿಸಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ. 

ಪಟ್ಟಣದ ಹೊಂಬಾಳಮ್ಮನ ರೈತ ಕರಿಯಪ್ಪ ಅವರ ರಾಗಿ ಹೊಲ ಮತ್ತು ತೊಗರಿ ಗಿಡಕ್ಕೆ ದುಷ್ಕರ್ಮಿಗಳು ವಿಷ ಸಿಂಪಡಿಸಿದ್ದಾರೆ. ಒಂದು ಎಕರೆ ವಿಸ್ತೀರ್ಣದಲ್ಲಿರುವ ರಾಗಿ ಹೊಲ, ತೊಗರಿ ಮತ್ತು ಅವರೆ ಗಿಡಗಳು ಬೆಂದು ಹೋಗಿವೆ. ಈ ಬಗ್ಗೆ ಕರಿಯಪ್ಪನ ಮಕ್ಕಳಾದ ರಂಗಯ್ಯ, ತಿಮ್ಮಯ್ಯ, ಸಿದ್ಧಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಒಟ್ಟು 50ಸಾವಿರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಭೇಟಿ: ರಾಗಿ ಹೊಲಕ್ಕೆ ವಿಷ ಸಿಂಪಡಿಸಿರುವ ಸುದ್ದಿ ತಿಳಿದ ತಕ್ಷಣ ಚಂದುರಾಯನ ಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ನಾಗರಾಜು ಕೆಂಕೆರೆ, ಹನುಮಂತರಾಯಪ್ಪ, ನಾರಾಯಣ್ ರೆಡ್ಡಿ ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲಿಸಿದರು. ಬೆಂದು ಹೋದ ರಾಗಿ ಪೈರನ್ನು ತಪಾಸಣೆಗೆ ಕೊಂಡೊಯ್ಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.