ADVERTISEMENT

ಶಿವಚಲುವಮ್ಮ, ಅನ್ನಪೂರ್ಣಮ್ಮಗೆ ಅಧಿಕಾರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 10:31 IST
Last Updated 20 ಸೆಪ್ಟೆಂಬರ್ 2013, 10:31 IST

ಕನಕಪುರ: ತಾಲ್ಲೂಕಿನ ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ–ಉಪಾಧ್ಯಕ್ಷರ ಆಯ್ಕೆಗಾಗಿ ಗುರುವಾರ ನಡೆದ ಚುನಾವಣೆಯಲ್ಲಿ ಶಿವಚಲು ವಮ್ಮ ಅಧ್ಯಕ್ಷರಾಗಿ, ಅನ್ನಪೂರ್ಣಮ್ಮ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ ಯಾಗಿದ್ದಾರೆ.

ಗ್ರಾಮ ಪಂಚಾಯಿತಿಯ ಎರಡನೇ ಅಧಿಕಾರ ಅವಧಿಗೆ ಚುನಾವಣೆ ನಿಗದಿಯಾಗಿದ್ದು ಅದರಂತೆ ಗುರು ವಾರ ಚುನಾವಣಾಧಿಕಾರಿ ಯಾದ ಉಪ ನೊಂದಣಾಧಿಕಾರಿ ಎಂ.ಸಂತೋ ಷಕುಮಾ ಚುನಾವಣೆ ನಡೆಸಿದರು.

ಅಧ್ಯಕ್ಷ ಸ್ಥಾನವು ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿದ್ದರಿಂದ ಶಿವಚಲು ವಮ್ಮ (ಕುರುಬ ಸಮುದಾಯ)
ಹೊರತು ಪಡಿಸಿ ಬೇರಾರು ಸದಸ್ಯ ರಿಲ್ಲದ ಕಾರಣ ಹಾಗೂ  ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದ್ದರಿಂದ ಅನ್ನಪೂರ್ಣಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆಮಾಡಿ ಘೋಷಿಸಿದರು.

ಅಭಿನಂದನೆ: ಕಾಂಗ್ರೆಸ್‌ನ ಹೋಬಳಿ ಮುಖಂಡ ಡಿ.ಕೆ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಭುಜಂ ಗಯ್ಯ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ, ಏಳಗಳ್ಳಿ ರವಿ, ಹೂಕುಂದ ಕಾಂತರಾಜು, ಮಹಿಮ ನಹಳ್ಳಿ ಬಸವಲಿಂಗ, ರವಿ, ಉಯ್ಯಂಬಳ್ಳಿ ಶಿವರಾಜು, ಅಡಕೆಹಳ್ಳ ರಾಜೇಂದ್ರ ಮೊದಲಾದವರು ನೂತನ ಅಧ್ಯಕ್ಷರಿಗೆ ಪುಷ್ಪಮಾಲಿಕೆ ಹಾಕಿ ಅಭಿನಂದನೆ ಸಲ್ಲಿಸಿದರು.

ಕೃತಜ್ಞತೆ: ಕುರುಬ ಸಮುದಾಯದ ಒಬ್ಬ ಮಹಿಳೆಗೆ ಮೊದಲ ಬಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ದೊರಕಿಸಿ ಕೊಟ್ಟಿರುವುದಕ್ಕೆ ಶಾಸಕ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರಿಗೆ ಮಹಿಮನ ಹಳ್ಳಿ, ಉಯ್ಯಂಬಳ್ಳಿ ಚಿಲಂಚವಾ ಡಿಗಳಲ್ಲಿನ ಕುರುಬ ಸಮುದಾಯ ದವರು ಕೃತಜ್ಞತೆ ಸಲ್ಲಿಸಿದ್ದಾರೆ.   

  ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿಮಾರೇಗೌಡ ಸಹಾಯಕ ಚುನಾವಣಾ ಅಧಿಕಾರಿಯಾಗಿ ಕೆಲಸ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.