ADVERTISEMENT

ಸಹಕಾರ ಸಂಘ: ಚುನಾವಣೆ ವೇಳಾಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 11:05 IST
Last Updated 4 ಜನವರಿ 2014, 11:05 IST

ರಾಮನಗರ: ವಿವಿಧ ಪ್ರಾಥಮಿಕ ಸಹ ಕಾರ ಸಂಘಗಳಿಗೆ 2014– -15 ರಿಂದ 2018– -19ನೇ ಸಾಲಿನ ಅವಧಿಯ ಆಡಳಿತ ಮಂಡಳಿ ಚುನಾವಣೆಯನ್ನು 2014 ಮಾರ್ಚ್ 2 ರೊಳಗೆ ನಡೆಸಬೇಕಿದೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯ ಪ್ರಾಥಮಿಕ ಸಹಕಾರ ಸಂಘಗಳ ಚುನಾವಣಾ ವೇಳಾಪಟ್ಟಿಯನ್ನು ಜಿಲ್ಲಾ ಸಹಕಾರ ಸಂಘಗಳ ಚುನಾವಣಾಧಿಕಾರಿ ಕೆ.ಎನ್.ನಂಜುಂಡೇಗೌಡ ಈಗಾಗಲೇ  ಪ್ರಕಟಿಸಿದ್ದಾರೆ.

ಚುನಾವಣಾ ವೇಳಾಪಟ್ಟಿ: ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಫೆಬ್ರುವರಿ 2, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಫೆ.9, ಪಟ್ಟಣ ಸಹಕಾರ ಸಂಘ ಗಳು, ಗ್ರಾಹಕರ ಸಹಕಾರ ಸಂಘಗಳು, ಪಿಕಾಡರ್್ ಬ್ಯಾಂಕ್‌ಗಳು, ನೌಕರರ ಪತ್ತಿನ ಸಹಕಾರ ಸಂಘಗಳು, ಸೌಹಾರ್ದ ಹಾಗೂ ಇತರೆ ಪತ್ತಿನ ಸಹಕಾರ ಸಂಘಗಳು ಮತ್ತು  ಫೆ.  2 ರಂದು ಚುನಾವಣೆ ನಡೆಸದೇ ಉಳಿದ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಫೆ.16 ಮತ್ತು 17 ಚುನಾವಣಾ ದಿನ ನಿಗದಿ ಪಡಿಸಲಾಗಿದೆ.

ಗೃಹ ನಿರ್ಮಾಣ ಸಹಕಾರ ಸಂಘಗಳು, ಎಲ್ಲಾ ಪತ್ತೇತರ ಸಹಕಾರ ಸಂಘಗಳು, ಇತರೆ ಎಲ್ಲಾ ಸಹಕಾರ ಸಂಘಗಳಿಗೆ ಫೆ  23 ರಂದು ಚುನಾವಣೆ ನಡೆಸ ಬೇಕಿರುತ್ತದೆ. ಚುನಾವಣೆ ನಡೆಸಲು ಬಾಕಿ ಉಳಿದ ಇತರೆ ಯಾವುದೇ ಸಹಕಾರ ಸಂಘಗಳಿಗೆ ಚುನಾವಣೆ ನಡೆಸಲು ಮಾರ್ಚ್‌ 2 ರಂದು ದಿನ ನಿಗದಿಪಡಿಸಿದೆ.

ಜಿಲ್ಲೆಯ ವಿವಿಧ ಇಲಾಖೆಯ ಸಿಬ್ಬಂದಿಗಳನ್ನು ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ ಮತ್ತು ಮತದಾನ ಸಿಬ್ಬಂದಿಯನ್ನಾಗಿ ಚುನಾವಣಾ ಕಾರ್ಯಕ್ಕೆ ನೇಮಿಸಿದ್ದಲ್ಲಿ ಚುನಾವಣಾ ಕಾರ್ಯಕ್ಕೆ ಅನುಕೂಲವಾಗುವಂತೆ ನೌಕರರನ್ನು ಬಿಡುಗಡೆಗೊಳಿಸಲು ಮತ್ತು ಚುನಾವಣಾ ಕಾರ್ಯಕ್ಕೆ ನೇಮಕಾತಿ ಆಗುವ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಚುನಾವಣಾ ಕೆಲಸವನ್ನು ಸಹಕಾರ ಸಂಘಗಳ ಕಾಯಿದೆ ಹಾಗೂ ನಿಯಮಗಳನ್ವಯ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ. ಡಿ.ಎಸ್.ವಿಶ್ವನಾಥ್ ಆದೇಶಿಸಿದ್ದಾರೆ.

ಚುನಾವಣೆ ಬಗ್ಗೆ ಹೆಚ್ಚಿನ ಮಾಹಿತಿ ಅಗತ್ಯವಿದ್ದಲ್ಲಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ, ಕಂದಾಯ ಭವನ, ರಾಮನಗರ ಇವರ ಕಚೇರಿ ದೂರವಾಣಿ: 27274008 ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ರಾಮನಗರ ಉಪವಿಭಾಗ, ರಾಮನಗರ ಇವರ ಕಚೇರಿ ದೂರವಾಣಿ: 27271256 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.