ADVERTISEMENT

ಸುಳ್ಳೇರಿ ಕೆರೆಗೆ ನೀರು ಪೂರೈಕೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 19:30 IST
Last Updated 21 ಅಕ್ಟೋಬರ್ 2011, 19:30 IST

ಚನ್ನಪಟ್ಟಣ: ತಾಲ್ಲೂಕಿನ ಬಹುನಿರೀಕ್ಷಿತ ಗರಕಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ಭಾಗಶಃ ಪೂರ್ಣಗೊಂಡಿದ್ದು, ಇಗ್ಗಲೂರು ಬ್ಯಾರೇಜ್ ನಿಂದ ಗರಕಹಳ್ಳಿ ಕೆರೆಗೆ ನೀರುಣಿಸುವ ಕಾರ್ಯಕ್ಕೆ ಗುರುವಾರ ಪರೀಕ್ಷಾರ್ಥವಾಗಿ ಚಾಲನೆ ನೀಡಲಾಯಿತು.

ಇಗ್ಗಲೂರಿನ ಪಂಪ್ ಹೌಸ್ ಬಳಿ ಗುಂಡಿ ಒತ್ತುವ ಮೂಲಕ ನೀರು ಪೂರೈಸುವ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪಿ. ಯೋಗೀಶ್ವರ್ ಚಾಲನೆ ನೀಡಿದರು.

 ಬಾಕಿ ಉಳಿದಿರುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಹಾಗೂ ಸುಳ್ಳೇರಿ ಕೆರೆಗೆ ಶೀಘ್ರದಲ್ಲೇ ನೀರು ಪೂರೈಕೆ ಮಾಡುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಪ್ರಗತಿಪರ ರೈತ ಜಿ. ಕೃಷ್ಣೇಗೌಡ, ಬಿಜೆಪಿ ಮುಖಂಡರಾದ ಅಕ್ಕೂರು ಶೇಖರ್, ರಾಜಣ್ಣ ಹರೂರು, ಹುಲುವಾಡಿ ಶಿವಕುಮಾರ್ ಹಾರೋಕೊಪ್ಪ ಶಂಕರೇಗೌಡ, ಪ್ರೇಮ್‌ಕುಮಾರ್, ಗರಕಹಳ್ಳಿ ಚೇತನ್, ನೀರಾವರಿ ಇಲಾಖೆ ಅಧಿಕಾರಿಗಳಾದ ಗಂಗಾಧರ್, ವೆಂಕಟೇಗೌಡ ಇನ್ನು ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.