ADVERTISEMENT

ಹಾಲು ಉತ್ಪಾದಕರ ಸಂಘ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2011, 19:30 IST
Last Updated 24 ಅಕ್ಟೋಬರ್ 2011, 19:30 IST

ಚನ್ನಪಟ್ಟಣ: ತಾಲ್ಲೂಕಿನ ಗ್ರಾಮದಲ್ಲಿ ಆರಂಭವಾದ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಬಮೂಲ್ ನಿರ್ದೇಶಕ ಎಸ್. ಲಿಂಗೇಶ್ ಕುಮಾರ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಮುಂಗಾರು ಮಳೆ ಸರಿಯಾದ ಸಮಯಕ್ಕೆ ಬೀಳದೆ ರೈತರು ಈ ಬಾರಿ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಂಥ ಮಳೆ ಅನಿಶ್ಚಿತತೆಯಲ್ಲಿ ರೈತರು ಬೇಸಾಯದ ಜೊತೆಗೆ ಹೈನುಗಾರಿಕೆಯಲ್ಲೂ ತೊಡಗಿಕೊಂಡಾಗ ಜೀವನ ನಿರ್ವಹಣೆಗೆ ಸುಲಭವಾಗುತ್ತದೆ ಎಂದರು

ಹೈನುಗಾರಿಕೆ ಅಭಿವೃದ್ಧಿ ಜೊತೆಗೆ, ಹೈನು ಕೃಷಿಕರ ಮಕ್ಕಳ ಭವಿಷ್ಯ ರೂಪಿಸುವುದಕ್ಕೆ ಪ್ರತಿಭಾ ಪುರಸ್ಕಾರ ಸೇರಿದಂತೆ ಯಶಸ್ವಿನಿ ಯೋಜನೆ, ಜನಶ್ರೀ ಯೋಜನೆ, ಅಮೃತ ಯೋಜನೆ, ರಾಸುಗಳ ಗುಂಪು ಯೋಜನೆಗಳನ್ನು ರೂಪಿಸಲಾಗಿದೆ. ಇವುಗಳ ಸದ್ಬಳಕೆ ಮಾಡಿಕೊಂಡು, ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ ಸಂಘವನ್ನು ಉನ್ನತಸ್ಥಾನಕ್ಕೆ ಕೊಂಡೊಯ್ಯಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಎ.ಆರ್.ಚಂದ್ರಶೇಖರ್, ವ್ಯವಸ್ಥಾಪಕ ಎಚ್.ಪಿ.ಮುನಿರಾಜ್, ಡಾ.ಕೆ.ಸಿ. ಶ್ರೀಧರ್ ವಿಸ್ತಾರಣಾಧಿಕಾರಿಗಳಾದ ಎಚ್. ಶ್ರೀನಿವಾಸ್, ಮಾದೇಗೌಡ, ಡಾ.ರಾಘವೇಂದ್ರ ಬಿ.ವಿ. ಶಿವಪ್ರಸಾದ್, ಗ್ರಾ,ಪಂ. ಅಧ್ಯಕ್ಷ ಬಸವರಾಜು, ಗ್ರಾಮದ ಮುಖಂಡರು. ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.