ADVERTISEMENT

‘ಯುವಶಕ್ತಿ ದೇಶದ ಪ್ರಗತಿಗೆ ಬಳಕೆಯಾಗಲಿ’

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2013, 10:23 IST
Last Updated 23 ಡಿಸೆಂಬರ್ 2013, 10:23 IST

ಕನಕಪುರ: ದೇಶದ ಶಕ್ತಿಯಾದ ಯುವ ಕರು ಉನ್ನತ ವ್ಯಾಸಂಗ ದೊಂದಿಗೆ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಮೂಲಕ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಬೇಕೆಂದು ಸಂಸದ ಡಿ.ಕೆ. ಸುರೇಶ್ ಹೇಳಿದರು.

ಪಟ್ಟಣದ ದೇಗುಲಮಠ ನಿರ್ವಾಣ ಸ್ವಾಮಿ ಸಮುದಾಯ ಭವನದಲ್ಲಿ ವೀರ ಶೈವ ಪ್ರತಿಭಾ ಪುರಸ್ಕಾರ ಸಮಿತಿ ವತಿ ಯಿಂದ ಏರ್ಪಡಿಸಿದ್ದ ಪ್ರತಿಭಾ ಪುರ ಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ದೇಶದ ಮುಂದಿರುವ ಸವಾಲು ಗಳನ್ನು ಸಮರ್ಪಕವಾಗಿ ಎದುರಿಸಲು ಯುವಕರು ಸನ್ನದ್ಧರಾಗಬೇಕು ಎಂದು ಸಲಹೆ ನೀಡಿದರು.

ದೇಗುಲಮಠದ ಕಿರಿಯ ಶ್ರೀಗಳಾದ ಮುಮ್ಮಡಿ ಮಹಾಲಿಂಗ ಸ್ವಾಮೀಜಿ, ಮರಳೇಗವಿ ಮಠದ ಮುಮ್ಮಡಿ ಶಿವ ರುದ್ರ ಸ್ವಾಮೀಜಿ, ಬಿಲ್ವಪತ್ರೆ ಮಠದ ಶಿವ ಲಿಂಗ ಸ್ವಾಮೀಜಿ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್. ರವಿ, ದೊಡ್ಡಮರಳವಾಡಿ ಕೀರ್ತಿ ಹಾಸನ್, ಬೆಂಗಳೂರಿನ ಮಲ್ಲಿಕಾ ರ್ಜುನ್, ಸಮಿತಿ ಅಧ್ಯಕ್ಷ ಸಿ.ಬಿ. ಮಹೇಶ್, ಸಂಚಾಲಕ ಶೆಟ್ಟಿಮಂಜು, ಮಹೇಶ್, ಮಂಜುನಾಥ್, ಸಮುದಾಯದ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.