ADVERTISEMENT

25ಕ್ಕೆ ರಾಜ್ಯ ಮಟ್ಟದ ಗಾಯನ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2012, 19:05 IST
Last Updated 20 ಆಗಸ್ಟ್ 2012, 19:05 IST

ರಾಮನಗರ:  ರಾಜ್ಯ ಮಟ್ಟದ 8ನೇ ವರ್ಷದ ಸೋಬಾನೆ ಪದಗಳ ಗಾಯನ ಸ್ಪರ್ಧೆ ಆಗಸ್ಟ್ 25ರಂದು ರಾಮನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ.

ದಿವಂಗತ ಕೆಂಪಮ್ಮ ಹಾಗೂ ಸಿದ್ದೇಗೌಡ ಸ್ಮರಣಾರ್ಥ, ಕಸ್ತೂರಿ ಕನ್ನಡ ವೇದಿಕೆ, ಮರಿದೇವರು ಅಭಿಮಾನಿಗಳ ಸಂಘ ಹಾಗೂ ಸಂಸ್ಕೃತಿ  ಸೌರಭ ಟ್ರಸ್ಟ್ ಆಶ್ರಯದಲ್ಲಿ ಏರ್ಪಡಿಸಲಾಗಿರುವ ಈ ಸ್ಫರ್ಧಾ ಕಾರ್ಯಕ್ರಮವನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಜಯಂತಿ ಕಾಶಿ ಉದ್ಘಾಟಿಸುವರು.

ಸೋಬಾನೆ ಪದ ಗಾಯನ ಸ್ಪರ್ಧೆಗೆ ಭಾಗವಹಿಸುವ ತಂಡಗಳಲ್ಲಿ ಕನಿಷ್ಠ 4 ಜನ ಹಾಡುಗಾರರಿಬೇಕು. ಭಾಗವಹಿಸುವ ತಂಡಗಳ ಹೆಸರನ್ನು  ರಾ.ಬಿ.ನಾಗರಾಜು-98440-25286, ಆರ್.ಜಿ.ಚಂದ್ರಶೇಖರ್-96631-38981, ಕೆ.ನರಸಿಂಗ್ ರಾವ್-98861-11209, ಪಾದ್ರಳ್ಳಿ ರಾಜು-97413-27920, ಛಲಪತಿ-78290-30091, ನಿತ್ಯಾ-98446-61709 ಇಲ್ಲಿ ನೊಂದಾಯಿಸಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.