ADVERTISEMENT

40 ಚೀಲ ಆಹಾರ ಧಾನ್ಯ ವಶ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 4:51 IST
Last Updated 26 ಏಪ್ರಿಲ್ 2021, 4:51 IST
ಚನ್ನಪಟ್ಟಣದಲ್ಲಿ ವಶಪಡಿಸಿಕೊಂಡಿರುವ ಆಹಾರ ಧಾನ್ಯ ಇದ್ದ ಚೀಲಗಳು ಹಾಗೂ ಆಟೊ
ಚನ್ನಪಟ್ಟಣದಲ್ಲಿ ವಶಪಡಿಸಿಕೊಂಡಿರುವ ಆಹಾರ ಧಾನ್ಯ ಇದ್ದ ಚೀಲಗಳು ಹಾಗೂ ಆಟೊ   

ಚನ್ನಪಟ್ಟಣ: ಮತದಾರರಿಗೆ ಹಂಚಲು ಸರಕು ಸಾಗಣೆ ಆಟೊದಲ್ಲಿ ಕೊಂಡೊಯ್ಯುತ್ತಿದ್ದ ಸುಮಾರು 40 ಆಹಾರ ಧಾನ್ಯದ ಚೀಲಗಳನ್ನು ಪಟ್ಟಣದ ಕೋಟೆ ಮಸೀದಿ ರಸ್ತೆಯಲ್ಲಿ ಚುನಾವಣಾಧಿಕಾರಿಗಳ ತಂಡ ಭಾನುವಾರ ದಾಳಿ ನಡೆಸಿ ವಶಕ್ಕೆ ಪಡೆದಿದೆ.

ಈ ಸಂಬಂಧ ಆಟೊ ಚಾಲಕ ರಫಿ ಅಹಮದ್ ಖಾನ್ ಮತ್ತು ಸೈಯದ್ ವಸಿಂ ಎಂಬುವರನ್ನು ಬಂಧಿಸಿದೆ. ಆಟೊವನ್ನು ವಶಕ್ಕೆ ಪಡೆದು, ಪಟ್ಟಣದ ಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಮತದಾರರಿಗೆ ಹಂಚಲು ಆಹಾರ ಧಾನ್ಯಗಳ ಚೀಲಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆಸಲಾಗಿದೆ.

ಪಟ್ಟಣದ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಚೀಲಗಳು ಯಾರಿಗೆ ಸೇರಿದ್ದು ಎನ್ನುವುದು ತಿಳಿದುಬಂದಿಲ್ಲ. ದಾಳಿ ನಡೆಸಿದ ಅಧಿಕಾರಿಗಳ ತಂಡದಲ್ಲಿ ಎಚ್.ವಿ. ರಘು, ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ದಯಾನಂದ, ಭೀಮರಾಯ, ಅಬಕಾರಿ ಇಲಾಖೆಯ ಉಜ್ಜನಿ ಸುರೇಶ್, ವಾಹನ ಚಾಲಕ ರಘುನಂದನ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.