ADVERTISEMENT

ಕೇಂದ್ರದ ಮಲತಾಯಿ ಧೋರಣೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2018, 10:51 IST
Last Updated 26 ಜನವರಿ 2018, 10:51 IST
ಕರ್ನಾಟಕ ಬಂದ್‌ ಅಂಗವಾಗಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಪ್ರಾಂತರೈತ ಸಂಘ ಮತ್ತಿತರೆ ಕನ್ನಡ ಪರ ಸಂಘಟನೆಗಳ ವತಿಯಿಂದ ಗುರುವಾರ ರಸ್ತೆ ತಡೆ ನಡೆಸಿದರು
ಕರ್ನಾಟಕ ಬಂದ್‌ ಅಂಗವಾಗಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಪ್ರಾಂತರೈತ ಸಂಘ ಮತ್ತಿತರೆ ಕನ್ನಡ ಪರ ಸಂಘಟನೆಗಳ ವತಿಯಿಂದ ಗುರುವಾರ ರಸ್ತೆ ತಡೆ ನಡೆಸಿದರು   

ಮಾಗಡಿ: ತಾಲ್ಲೂಕಿನಲ್ಲಿ ಬೆಳಿಗ್ಗೆಯಿಂದಲೇ ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ಸಂಚಾರಿಸಲಿಲ್ಲ. ಆಟೊಗಳ ಸಂಚಾರ ವಿರಳವಾಗಿತ್ತು. ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಕಡಿಮೆ ಇತ್ತು. ಸರ್ಕಾರಿ ಆಸ್ಪತ್ರೆ ಎಂದಿನಂತೆ ಕಾರ್ಯ ನಿರ್ವಹಿಸಿತು. ಪಿಎಸ್‌ಐ ಬಿ.ರವಿ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಪಟ್ಟಣದ ಕುದೂರು, ಸೋಲೂರು, ತಿಪ್ಪಸಂದ್ರ, ಗುಡೇಮಾರನಹಳ್ಳಿ ಸೇರಿದಂತೆ ವಿವಿಧೆಡೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಸಂಚಾರ ಕಡಿಮೆ ಇತ್ತು. ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ, ಕರ್ನಾಟಕ ಪ್ರಾಂತ ರೈತ ಸಂಘ, ಕಾರ್ಮಿಕ ಸಂಘಗಳ ಸಹಯೋಗದಲ್ಲಿ ಕಲ್ಯಾ ಬಾಗಿಲು ಬಳಿ ರಸ್ತೆ ತಡೆ ನಡೆಯಿತು.

ADVERTISEMENT

ರೈತ ಸಂಘದ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌, ಬಿ.ಎನ್‌.ನಂಜುಂಡಯ್ಯ, ಮಧು, ಚಕ್ರಬಾವಿ ರಾಜಣ್ಣ, ಕೆಪಿಆರ್‌ಎಸ್‌ನ ಸಂಚಾಲಕಿ ಎಸ್‌.ಜಿ.ವನಜಾ, ಯಶ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸುರೇಶ್‌, ರೇಣುಕಾ ಪ್ರಸಾದ್‌, ವಿಷ್ಣು ಸೇನಾ ಸಮಿತಿ ಜಗದೀಶ್‌, ಜನ್ಮಭೂಮಿ ಸಂಘಟನೆ ನಂದಕುಮಾರ್‌, ಲೋಕೇಶ್‌ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.