ADVERTISEMENT

ರಾಮನಗರ | 55 ಕೆ.ಜಿ ಪ್ಲಾಸ್ಟಿಕ್ ವಶ: ₹6 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 6:25 IST
Last Updated 23 ಸೆಪ್ಟೆಂಬರ್ 2025, 6:25 IST
ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡಿದ ರಾಮನಗರದ ಮಂಡಿಪೇಟೆಯ ಅಂಗಡಿಯೊಂದಕ್ಕೆ ನಗರಸಭೆ ಅಧಿಕಾರಿಗಳು ದಂಡ ವಿಧಿಸಿ ಪ್ಲಾಸ್ಟಿಕ್ ಜಪ್ತಿ ಮಾಡಿದರು
ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡಿದ ರಾಮನಗರದ ಮಂಡಿಪೇಟೆಯ ಅಂಗಡಿಯೊಂದಕ್ಕೆ ನಗರಸಭೆ ಅಧಿಕಾರಿಗಳು ದಂಡ ವಿಧಿಸಿ ಪ್ಲಾಸ್ಟಿಕ್ ಜಪ್ತಿ ಮಾಡಿದರು   

ರಾಮನಗರ: ನಿಷೇಧಿತ ಪ್ಲಾಸ್ಟಿಕ್ ಮಾರಾಟದ ವಿರುದ್ಧ ನಗರದ ವಿವಿಧ ಅಂಗಡಿಗಳ ಮೇಲೆ ಸೋಮವಾರ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳು ಸುಮಾರು 55 ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು, ಅಂಗಡಿ ಮಾಲೀಕರಿಗೆ ₹6 ಸಾವಿರ ದಂಡ ವಿಧಿಸಿದ್ದಾರೆ.

ಮುಖ್ಯರಸ್ತೆ, ಮಂಡಿಪೇಟೆ, ಹಳೆ ಬಸ್ ನಿಲ್ದಾಣ, ಕೆಂಗಲ್ ಹನುಮಂತಯ್ಯ ವೃತ್ತ, ಕೋರ್ಟ್ ರಸ್ತೆ, ಎಂ.ಜಿ. ರಸ್ತೆ ಸೇರಿದಂತೆ ವಿವಿಧೆಡೆ ದಾಲಿ ನಡೆಸಿದ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದ ಅಧಿಕಾರಿಗಳ ತಂಡವು, ನಿಷೇಧಿತ ಪ್ಲಾಸ್ಟಿಕ್ ಕವರ್‌ಗಳನ್ನು ವಶಕ್ಕೆ ಪಡೆಯಿತು. ಸಾರ್ವಜನಿಕವಾಗಿ ಧೂಮಪಾನ ಮಾಡುತ್ತಿದ್ದ ಮೂವರಿಗೆ ಇದೇ ವೇಳೆ ದಂಡದ ಬಿಸಿ ಮುಟ್ಟಿಸಿತು.

ಸರ್ಕಾರ ನಿಷೇಧಿಸಿರುವ ಪ್ಲಾಸ್ಟಿಕ್ ಅನ್ನು ಅಂಗಡಿಗಳಲ್ಲಿ ಮಾರಾಟ ಮಾಡಬಾರದು. ಆದೇಶ ಮೀರಿ ಮತ್ತೆ ಮತ್ತೆ ಮಾರಾಟ ಮಾಡುವುದು ಕಂಡುಬಂದರೆ ಅಂಗಡಿಯ ಪರವಾನಗಿ ರದ್ದುಪಡಿಸಲಾಗುವುದು ಎಂದು ತಂಡ ಎಚ್ಚರಿಕೆ ನೀಡಿದರು. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಮಣ್ಣಿನಲ್ಲಿ ಕರಗಬಲ್ಲ ಬಟ್ಟೆ ಬ್ಯಾಗ್‌ ಬಳಸಬೇಕು ಎಂದು ಸಲಹೆ ನೀಡಿದರು.

ADVERTISEMENT

ನಗರಸಭೆ ಆರೋಗ್ಯ ನಿರೀಕ್ಷಕ ದಿಲೀಪ ನದಾಫ, ಸಿಬ್ಬಂದಿ ಸದಾ ರಮೇಶ್, ಕೊಲ್ಲಾಪುರಿ, ನರಸಿಂಹ, ದೇವೆಂದ್ರ ಹಾಗೂ ಇತರರು ತಂಡದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.