ADVERTISEMENT

ಭೂ ಪರಿಹಾರಕ್ಕಾಗಿ ಲಂಚ: ಮೂವರು ಎಸಿಬಿ ಬಲೆಗೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 13:44 IST
Last Updated 2 ನವೆಂಬರ್ 2019, 13:44 IST

ರಾಮನಗರ: ಭೂ ಸಂತ್ರಸ್ಥರೊಬ್ಬರಿಗೆ ಪರಿಹಾರ ಧನದ ಬಿಡುಗಡೆಗಾಗಿ ಶನಿವಾರ ಲಂಚ ಪಡೆಯುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯ ಮೂವರು ಸಿಬ್ಬಂದಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದರು.

ಪ್ರಥಮ ದರ್ಜೆ ಸಹಾಯಕ ಕೇಶವ್‌, ದ್ವಿತೀಯ ದರ್ಜೆ ಸಹಾಯಕ ಪ್ರಮೋದ್‌ ಹಾಗೂ ಸೈಟ್ ಎಂಜಿನಿಯರ್ ಒಬ್ಬರ ವಾಹನ ಚಾಲಕ ಕಿರಣ್‌ಕುಮಾರ್‌ ಬಂಧಿತರು. ಬಿಡದಿ ಹೋಬಳಿಯ ಕೆಂಚನಕುಪ್ಪೆ ಗ್ರಾಮದ ನಿವಾಸಿಯೊಬ್ಬರ ಜಮೀನನ್ನು ಪ್ರಾಧಿಕಾರವು ಹೆದ್ದಾರಿ ವಿಸ್ತರಣೆಗಾಗಿ ವಶಪಡಿಸಿಕೊಂಡಿತ್ತು. ಇದಕ್ಕೆ ಪ್ರಾಧಿಕಾರದಿಂದ ನೀಡಬೇಕಾದ ಪರಿಹಾರ ಧನದ ಬಿಡುಗಡೆಗಾಗಿ ಆರೋಪಿಗಳು ₨1.7 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಸಂತ್ರಸ್ಥರು ಎಸಿಬಿಗೆ ದೂರು ನೀಡಿದ್ದರು. ಅವರ ಸೂಚನೆಯಂತೆ ದೂರುದಾರರು ಆರೋಪಿಗಳಾದ ಕೇಶವ್‌ ಹಾಗೂ ಪ್ರಮೋದ್‌ಗೆ ಶನಿವಾರ ₨1 ಲಕ್ಷ ಹಣ ನೀಡಿದ್ದರು. ಅದನ್ನು ಆರೋಪಿಗಳು ಕಾರ್‌ ಚಾಲಕ ಕಿರಣ್‌ಕುಮಾರ್ ಬಳಿ ಇರಿಸಿದ್ದರು. ಈ ಸಂದರ್ಭ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT