ADVERTISEMENT

ಪ್ರತಿಯೊಬ್ಬರು 10 ಸಸಿ ನೆಡಲು ಸಲಹೆ

ಹಸಿರು ಬೆಳೆಸಿ ಉಸಿರು ಉಳಿಸಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 3:47 IST
Last Updated 1 ಆಗಸ್ಟ್ 2021, 3:47 IST
ಕಾರ್ಯಕ್ರಮದಲ್ಲಿ ಎಸ್‌.ಎನ್. ಮಲ್ಲಿಕಾರ್ಜುನ ಮಾತನಾಡಿದರು. ವೈ.ಎನ್‌. ಶರ್ಮ, ನಂಜುಂಡಪ್ರಸಾದ್‌, ನರಸಿಂಹಯ್ಯ, ಪ್ರಶಾಂತ್‌ ಇದ್ದರು
ಕಾರ್ಯಕ್ರಮದಲ್ಲಿ ಎಸ್‌.ಎನ್. ಮಲ್ಲಿಕಾರ್ಜುನ ಮಾತನಾಡಿದರು. ವೈ.ಎನ್‌. ಶರ್ಮ, ನಂಜುಂಡಪ್ರಸಾದ್‌, ನರಸಿಂಹಯ್ಯ, ಪ್ರಶಾಂತ್‌ ಇದ್ದರು   

ರಾಮನಗರ: ಪ್ರತಿಯೊಬ್ಬರು ವರ್ಷಕ್ಕೆ ಕನಿಷ್ಠ 10 ಸಸಿಗಳನ್ನು ನೆಟ್ಟು ಬೆಳೆಸಬೇಕು. ಆಗಮಾತ್ರ ಪ್ರಕೃತಿಯ ಸಮತೋಲನ ಸಾಧ್ಯ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ (ಆಡಿಟ್) ಎಸ್‌.ಎನ್‌. ಮಲ್ಲಿಕಾರ್ಜುನ ಸ್ವಾಮಿ ಸಲಹೆ ನೀಡಿದರು.

ನಗರದ ಕೆಂಗಲ್ ಹನುಮಂತಯ್ಯ ಕ್ರೀಡಾ ಮತ್ತು ಸಾಂಸ್ಕೃತಿಕ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಕೆ.ಎಸ್.ಟಿ.ಪಿ.ಎ ಹಸಿರು ಯಾತ್ರಾ, ಹಸಿರು ಬೆಳೆಸಿ ಉಸಿರು ಉಳಿಸಿ ಅಭಿಯಾನದಲ್ಲಿ ಅವರು ಮಾತನಾಡಿದರು.

ಸದಾ ಲೆಕ್ಕ, ತೆರಿಗೆ ಎಂಬ ವಿಚಾರಗಳಲ್ಲೇ ಮುಳುಗಿ ಹೋಗಿರುವ ತೆರಿಗೆ ಸಲಹೆಗಾರರು ಭೂಮಿಯ ಉಳಿವಿಗೆ ಮುಂದಾಗಿರುವುದು ಶ್ಲಾಘನೀಯ ಕಾರ್ಯ ಎಂದರು.

ADVERTISEMENT

ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಬೆಂಗಳೂರು ವಲಯದ ಉಪಾಧ್ಯಕ್ಷ ವೈ.ಎನ್. ಶರ್ಮ ಮಾತನಾಡಿ, ಜಿ.ಎಸ್.ಟಿ ಆಡಿಟ್‌ನಲ್ಲಿ ತೆರಿಗೆ ಸಲಹೆಗಾರರು ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ವಾಣಿಜ್ಯ ತೆರಿಗೆ ಅಧಿಕಾರಿಗಳು ಈ ವಿಚಾರಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ತೆರಿಗೆ ಸಲಹೆಗಾರರಿಗೆ ವಾಣಿಜ್ಯ ತೆರಿಗೆ ಇಲಾಖೆಯು ಸಹಕಾರ ಮತ್ತು ರಕ್ಷಣೆ ಒದಗಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಎಸ್. ನಂಜುಂಡಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರಾದ ಕೆಂಪರಾಜು, ಮೊಹಮ್ಮದ್‌ ಯೂಸುಫ್‌, ತೆರಿಗೆ ಅಧಿಕಾರಿ ಜಿ. ವೀರಭದ್ರ, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಷ್ಣುತೀರ್ಥ ಜಮಖಂಡಿ, ಭಾರತ ತೆರಿಗೆ ವೃತ್ತಿಪರ ಸಂಸ್ಥೆಯ ಕಾರ್ಯದರ್ಶಿ ಡಿ.ಎಂ. ಭತ್ತದ್, ಐಟಿಪಿಐ ಮತ್ತು ಐಸಿಟಿಪಿಐ ಛೇರ್ಮನ್ ಶ್ರೀಧರ್ ಪಾರ್ಥಸಾರಥಿ, ರಾಮನಗರ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ನರಸಿಂಹಯ್ಯ, ಉಪಾಧ್ಯಕ್ಷ ಕೆ.ಆರ್. ಪ್ರಕಾಶ್‌, ಪ್ರಧಾನ ಕಾರ್ಯದರ್ಶಿ ಎಸ್. ಪ್ರಶಾಂತ್, ಕೆಂಗಲ್‌ ಹನುಮಂತಯ್ಯ ಸ್ಪೋರ್ಟ್ಸ್‌ ಕ್ಲಬ್‌ ಅಧ್ಯಕ್ಷ ಕುಮಾರಸ್ವಾಮಿ
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.