ADVERTISEMENT

ಬಿಡದಿ: ರಾಮನಹಳ್ಳಿ ಡೇರಿ ಅಧ್ಯಕ್ಷರಾಗಿ ಅನಿಲ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2025, 14:39 IST
Last Updated 26 ಏಪ್ರಿಲ್ 2025, 14:39 IST
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ರಾಮನಹಳ್ಳಿ ಹಾಲಿನ ಡೇರಿಯ ನೂತನ ಅಧ್ಯಕ್ಷರಾದ ಎಸ್. ಅನಿಲ್ ಮತ್ತು ಉಪಾಧ್ಯಕ್ಷ ಅರುಣ್ ಕುಮಾರ್ ಅವರನ್ನು ನಿರ್ದೇಶಕರು ಮತ್ತು ಗ್ರಾಮದ ಮುಖಂಡರು ಅಭಿನಂದಿಸಿದರು
ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ರಾಮನಹಳ್ಳಿ ಹಾಲಿನ ಡೇರಿಯ ನೂತನ ಅಧ್ಯಕ್ಷರಾದ ಎಸ್. ಅನಿಲ್ ಮತ್ತು ಉಪಾಧ್ಯಕ್ಷ ಅರುಣ್ ಕುಮಾರ್ ಅವರನ್ನು ನಿರ್ದೇಶಕರು ಮತ್ತು ಗ್ರಾಮದ ಮುಖಂಡರು ಅಭಿನಂದಿಸಿದರು   

ಬಿಡದಿ (ರಾಮನಗರ): ಇಲ್ಲಿನ ರಾಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಎಸ್. ಅನಿಲ್ ಹಾಗೂ ಉಪಾಧ್ಯಕ್ಷರಾಗಿ ಅರುಣ್‌ ಕುಮಾರ್ ಆಯ್ಕೆಯಾಗಿದ್ದಾರೆ.

ಎಸ್. ಸುರೇಶ್ ಮತ್ತು ರಾಧಾ ಶಿವರಾಂ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ಚುನಾವಣೆ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ಎಸ್. ಅನಿಲ್ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸಿದ್ಧೇಶಯ್ಯ ನಾಮಪತ್ರ ಸಲ್ಲಿಸಿದ್ದರು.

ಉಪಾಧ್ಯಕ್ಷ ಸ್ಥಾನಕ್ಕೆ ಅರುಣ್‍ಕುಮಾರ್ ಹಾಗೂ ಜೆಡಿಎಸ್ ಬೆಂಬಲಿತ ಜಯರತ್ನಮ್ಮ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಸಂಘದ ಒಟ್ಟು 12 ನಿರ್ದೇಶಕರು ಮತ ಚಲಾಯಿಸಿದರು. ಅಂತಿಮವಾಗಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳು ತಲಾ 7 ಮತ ಪಡೆದು ಗೆದ್ದರು. ಜೆಡಿಎಸ್ ಬೆಂಬಲಿತ ಪ್ರತಿಸ್ಪರ್ಧಿಗಳು ತಲಾ 5 ಮತಗಳನ್ನು ಪಡೆದು ಸೋತರು.

ADVERTISEMENT

ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆ ಅಧಿಕಾರಿ ಪುರುಷೋತ್ತಮ್ ಕಾರ್ಯನಿರ್ವಹಿಸಿದರು. ಸಂಘದ ಸಿಇಒ ಎಸ್. ರಮೇಶ್, ನಿರ್ದೇಶಕರಾದ ಎಸ್. ಸುರೇಶ್, ರಾಧಾ ಶಿವರಾಂ, ಶಿವಶಂಕರ್, ಶಿವನಂಜಯ್ಯ, ಶಿವಪ್ಪ, ಗೋಪಹಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಆರ್.ಎ. ಗೋಪಾಲ್, ಸದಸ್ಯರಾದ ರಾಮಚಂದ್ರ, ಸರೋಜಮ್ಮ ನಾಗರಾಜು, ರಾಧಾಕುಮಾರ್, ಸುಜಾತ ತಾಯಪ್ಪ, ಮುಖಂಡರಾದ ಅಪ್ಪಾಜಿಗೌಡ, ಪುಟ್ಟರಾಜು ಹಾಗೂ ಇತರರು ನೂತನ ಅಧ್ಯಕ್ಷ– ಉಪಾಧ್ಯಕ್ಷರನ್ನು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.