ADVERTISEMENT

ಮಾಗಡಿ: ಮತ್ತೊಂದು ಚಿರತೆ ಸೆರೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 14:47 IST
Last Updated 19 ಮೇ 2020, 14:47 IST
ಮಾಗಡಿ ಚಿಕ್ಕಹೂವರಸಿ ಕಟ್ಟೆಯ ಬಳಿ ಬೋನಿಗೆ ಬಿದ್ದ ಚಿರತೆ
ಮಾಗಡಿ ಚಿಕ್ಕಹೂವರಸಿ ಕಟ್ಟೆಯ ಬಳಿ ಬೋನಿಗೆ ಬಿದ್ದ ಚಿರತೆ   

ಮಾಗಡಿ: ಪಟ್ಟಣದ ಚಿಕ್ಕಹೂವರಸಿ ಕಟ್ಟೆಯ ಬಳಿ ಅಡ್ಡಗುಡ್ಡದ ತಪ್ಪಲಿನಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ನಾಲ್ಕು ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ.

ಮಂಗಳವಾರ ಬೆಳಿಗ್ಗೆ ಚಿರತೆ ಸೆರೆಯಾಗಿದೆ. ಇದನ್ನೂ ಸೇರಿಸಿ ಕಳೆದ ಮೂರು ದಿನದಲ್ಲಿ ಐದು ಚಿರತೆಗಳು ಬೋನಿಗೆ ಬಿದ್ದಿವೆ. ಕಳೆದ ವಾರ ಕದರಯ್ಯನ ಪಾಳ್ಯದಲ್ಲಿ ಮೂರು ವರ್ಷದ ಬಾಲಕ ಹಾಗೂ ಕೊತ್ತಗಾನಹಳ್ಳಿಯಲ್ಲಿ 68 ವರ್ಷದ ವೃದ್ಧೆ ಚಿರತೆ ದಾಳಿಗೆ ಬಲಿಯಾಗಿದ್ದರು. ನರಭಕ್ಷಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿತ್ತು. ಚಿರತೆಯ ಹೆಜ್ಜೆ ಗುರುತು ಆಧರಿಸಿ ತಾಲ್ಲೂಕಿನ ವಿವಿಧೆಡೆ ಇಲಾಖೆ 11 ಬೋನು ಇರಿಸಿತ್ತು.

ನಾಯಿ ಕೊಂದ ಚಿರತೆ: ಮಂಗಳವಾರ ಮುಂಜಾನೆ ವೆಂಕಟಯ್ಯನ ಪಾಳ್ಯದ ಬಾಲಾಜಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಪಕ್ಕದಲ್ಲಿ ಚಿರತೆ ದಾಳಿ ಮಾಡಿ ನಾಯಿಯನ್ನು ಕೊಂದು ತಿಂದಿರುವ ಘಟನೆ ನಡೆಸಿದೆ. ಗ್ರಾಮಸ್ಥರು ಭಯಭೀತರಾಗಿದ್ದು, ಚಿರತೆ ಸೆರೆಹಿಡಿಯಲು ಬೋನು ಇಡುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ .

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.