ADVERTISEMENT

ಎಪಿಕೆ ಫೈಲ್ ಕ್ಲಿಕ್ಕಿಸಿ ₹1.91 ಲಕ್ಷ ಕಳೆದುಕೊಂಡ ಶಿಕ್ಷಕ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 2:56 IST
Last Updated 5 ಅಕ್ಟೋಬರ್ 2025, 2:56 IST
   

ರಾಮನಗರ: ತನ್ನ ವಾಟ್ಸ್‌ಆ್ಯಪ್‌ಗೆ ಬಂದ ಎಪಿಕೆ ಫೈಲ್ ಸಂದೇಶ ಕ್ಲಿಕ್ಕಿಸಿ ತನ್ನ ಬ್ಯಾಂಕ್ ಹಾಗೂ ಇತರ ಮಾಹಿತಿಗಳನ್ನು ತುಂಬಿದ ಶಿಕ್ಷಕರೊಬ್ಬರು, ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ₹1.91 ಲಕ್ಷ ಕಳೆದುಕೊಂಡಿದ್ದಾರೆ. ಕನಕಪುರ ತಾಲ್ಲೂಕಿನ ಶಾಲೆಯೊಂದರ ಶಿಕ್ಷಕ ಮಹದೇವಸ್ವಾಮಿ ಹಣ ಕಳೆದುಕೊಂಡವರು.

ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ಮಹದೇವಸ್ವಾಮಿ ವಾಟ್ಸ್‌ಆ್ಯಪ್‌ಗೆ ಅವರ ಸಹೋದ್ಯೋಗಿ ಅವರಿಂದ ಎಪಿಕೆ ಫೈಲ್‌ ಸಂದೇಶ ಬಂದಿತ್ತು. ಅದನ್ನು ತೆರೆದು ನೋಡಿದಾಗ ಎಂಪಿಎನ್, ಡೆಬಿಟ್ ಕಾರ್ಡ್, ಸಿವಿವಿ ನಂಬರ್ ಸೇರಿದಂತೆ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿಗಳು ತೆರೆದುಕೊಂಡಿವೆ.

ಅಲ್ಲಿರುವ ಮಾಹಿತಿಯನ್ನು ಮಹದೇವಸ್ವಾಮಿ ಅವರು ಭರ್ತಿ ಮಾಡುತ್ತಿದ್ದಂತೆ, ಅವರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹1.91 ಲಕ್ಷ ಕಡಿತಗೊಂಡಿದೆ. ಆಗ ಅವರಿಗೆ ತಾನು ಆನ್‌ಲೈನ್ ವಂಚಕರ ಜಾಲಕ್ಕೆ ಸಿಲುಕಿರುವುದು ಗೊತ್ತಾಗಿದೆ. ಈ ಕುರಿತು, ಮಹದೇವಸ್ವಾಮಿ ಅವರು ರಾಮನಗರ ಸಿಇಎನ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

ADVERTISEMENT

ಕಾಪರ್ ವೈರ್ ಕಳ್ಳತನ

ಜಿಲ್ಲೆಯ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟರೆಡ್ಡಿಪಾಳ್ಯ ಗ್ರಾಮದಲ್ಲಿರುವ ಹಿನಾಯತ್ ಷರೀಪ್ ಎಂಬುವರ ಗುಜರಿ ಅಂಗಡಿಗೆ ನುಗ್ಗಿರುವ ಕಳ್ಳರು, ಸುಮಾರು ₹3.50 ಲಕ್ಷ ಮೌಲ್ಯದ 500 ಕೆ.ಜಿ ಕಾಪರ್ ವೈರ್ ಅನ್ನು ಇತ್ತೀಚೆಗೆ ಕಳ್ಳತನ ಮಾಡಿದ್ದಾರೆ. ರಾತ್ರಿ 9.30ರ ಸುಮಾರಿಗೆ ಅಂಗಡಿಗೆ ಬಂದಿರುವ ಕಳ್ಳರು, ಕೃತ್ಯ ಎಸಗಿದ್ದಾರೆ. ಘಟನೆ ಕುರಿತು ಕಗ್ಗಲಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.