ಕುದೂರು: ಹೋಬಳಿಯ ಕನ್ನಸಂದ್ರ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಚಲುವಯ್ಯ ವಿಜೇತರಾದರೆ, ಉಪಾಧ್ಯಕ್ಷ ಗೋವಿಂದರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಚಲುವಯ್ಯ, ಕಾಂಗ್ರೆಸ್ ಬೆಂಬಲಿತ ರಾಮಚಂದ್ರಯ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗೋವಿಂದರಾಜು ನಾಮಪತ್ರ ಸಲ್ಲಿಸಿದ್ದರು. ರಾಮಚಂದ್ರಯ್ಯ ಮೂರು ಮತ ಪಡೆದರೆ, ಚಲುವಯ್ಯ ಏಳು ಮತಗಳನ್ನು ಪಡೆದು ವಿಜೇತರಾಗಿದ್ದಾರೆ.
ಚುನಾವಣಾಧಿಕಾರಿ ವೈ. ವೆಂಕಟೇಶ್ ಕಾರ್ಯನಿರ್ವಹಿಸಿದರು. ನೂತನ ಅಧ್ಯಕ್ಷರಾಗಿ ಚಲುವಯ್ಯ ಚುನಾಯಿತರಾಗುತ್ತಿದ್ದಂತೆ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ನಿರ್ದೆಶಕರಾದ ಲಕ್ಷ್ಮಮ್ಮ, ಅಲಮೇಲಮ್ಮ, ಗೋವಿಂದರಾಜು, ಗಂಗಬೈಲಯ್ಯ, ಗಂಗಣ್ಣ, ಚಿಕ್ಕಣ್ಣ, ರಾಮಚಂದ್ರಯ್ಯ, ಮುಖಂಡರಾದ ಎಂ.ಸಿ.ವೆಂಕಟೇಶ್, ಮಾರುತಿ ಗೌಡ, ಹನುಮಂತರಾಯಪ್ಪ, ಕೆ.ರವಿ, ಮಲ್ಲಿಗುಂಟೆ ರಮೇಶ್ ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.