ADVERTISEMENT

ಜೂಜು ಅಡ್ಡೆ ಮೇಲೆ ದಾಳಿ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2025, 16:32 IST
Last Updated 3 ಏಪ್ರಿಲ್ 2025, 16:32 IST

ಕನಕಪುರ: ತೆಂಗಿನ ಮರದದೊಡ್ಡಿ ಗ್ರಾಮದಲ್ಲಿ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿ ಪಣಕ್ಕೆ ಇಟ್ಟಿದ್ದ ಹಣ ಮತ್ತು ಜೂಜಾಡುತ್ತಿದ್ದವರನ್ನು ವಶಕ್ಕೆ ಪಡೆದಿದ್ದಾರೆ.

ತೆಂಗಿನ ಮರದದೊಡ್ಡಿ ಸಿದ್ದಮಲ್ಲಯ್ಯ (53) ಬಂಧಿತ ಆರೋಪಿ. ಇವರ ಜೊತೆಯಲ್ಲಿ ಜೂಜಾಡುತ್ತಿದ್ದ ಸೀಗೆಕೋಟೆ ಪ್ರಭುಲಿಂಗ, ಸಾಮಂದಯ್ಯ, ತೆಂಗಿನ ಮರದದೊಡ್ಡಿ ಮೋಹನ್ ಹಾಗೂ ಇತರೆ ಒಟ್ಟು 5 ಜನರು ಸ್ಥಳದಿಂದ ಪರಾರಿಯಾಗಿದ್ದಾರೆ.

ಯುಗಾದಿ ಹಬ್ಬದಲ್ಲಿ ಜೂಜಾಡದಂತೆ ಪೊಲೀಸ್ ಪ್ರಕಟಣೆ ಹೊರಡಿಸಿದ್ದರೂ ಜೂಜಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ₹2,100 ನಗದು ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.