ಮಾಗಡಿ: ‘ಹಂಚಿ ತಿನ್ನುವುದರಿಂದ ಜೀವನದಲ್ಲಿ ಆನಂದ ಸಿಗುತ್ತದೆ’ ಎಂದು ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಸಾಮ್ರಾಟ್ ಗೌಡ ತಿಳಿಸಿದರು.
ಪಟ್ಟಣದ 14ನೇ ವಾರ್ಡ್‌ನ ಬಡವರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು.
‘ಕೊರೊನಾ ಸೋಂಕಿನ ಕಂಟಕ ಮುಗಿದು ಜನಸಾಮಾನ್ಯರು ಬದುಕು ಸಾಮಾನ್ಯ ಸ್ಥಿತಿಗೆ ಬರುವವರೆಗೂ ದಿನಸಿ ಕಿಟ್ ವಿತರಿಸುತ್ತೇವೆ. ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡು ಶಿಕ್ಷಣ ಕೊಡಿಸುತ್ತೇನೆ’ ಎಂದರು.
ಪುರಸಭಾ ಉಪಾಧ್ಯಕ್ಷ ರಹಮತ್, ಸದಸ್ಯರಾದ ರಿಯಾಜ್ ಅಹಮದ್, ಶಬ್ಬೀರ್‌ಪಾಷಾ, ಮಾಜಿ ಸದಸ್ಯ ಶಿವಕುಮಾರ್ ಗಾಣಿಗ, ಸವಿತಾ ಸಮಾಜದ ಜಿಲ್ಲಾ ಉಪಾಧ್ಯಕ್ಷ ಎಂ. ಮುನಿಕೃಷ್ಣ, ರಾಜ್ಯ ಕಾರ್ಮಿಕ ಮುಖಂಡ ಬಸವರಾಜ್ ಇದ್ದರು. 200 ಜನರಿಗೆ ದಿನಸಿ ಕಿಟ್ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.