ಶಿಡ್ಲಘಟ್ಟ: ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಎದುರಾಗಬಹುದಾದ ಅಡ್ಡ ಪರಿಣಾಮಗಳ ಬಗ್ಗೆ ಅರಿವು ಇರಬೇಕು. ಆದರೆ, ವಿನಾಕಾರಣ ಭಯ ಬೀಳುವ ಅಗತ್ಯವಿಲ್ಲ ಎಂದು ಬೆಂಗಳೂರಿನ ಸಮತ್ವಂ ಸೇವಾ ಸಂಸ್ಥೆ ಮುಖ್ಯಸ್ಥ ಡಾ.ಸತ್ಯನಾರಾಯಣ ಶ್ರೀಕಂಠ ತಿಳಿಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದಲ್ಲಿ ಭಾನುವಾರ ನಡೆದ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶದಲ್ಲಿ ಪ್ರತಿ 100 ಮಂದಿಗೆ 20 ಮಂದಿ ಹಾಗೂ ಗ್ರಾಮೀಣ ಭಾಗದಲ್ಲಿ ಶೇ10 ಮಂದಿ ಮಧುಮೇಹ, ಅಧಿಕ ರಕ್ತದೊತ್ತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆರಂಭದ ಹಂತದಲ್ಲೇ ತಪಾಸಣೆ ನಡೆಸಿಕೊಂಡು ವೈದ್ಯರ ಸೂಚನೆ, ಸಲಹೆಯಂತೆ ಔಷಧ ತೆಗೆದುಕೊಳ್ಳುವುದು ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ತಂದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸಮತ್ವಂ ಸೇವಾ ಸಂಸ್ಥೆ ಡಾ.ಚೈತ್ರಾ, ಪುವ್ವಾಡ ಫೌಂಡೇಷನ್‌ನ ಡಾ.ಪುವ್ವಾಡ ಸಂದೀಪ್, ಡಾ.ಪ್ರಿಯಾಂಕಾ, ಎಂ.ಕೆ.ವೀರಕುಮಾರ್, ಸ್ವಯಂ ಸೇವಕರಾದ ಮನೋಜ್, ಎನ್.ಮಂಜುನಾಥ್, ಪ್ರವೀಣ್, ವಿನಯ್, ಸತೀಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.