ADVERTISEMENT

ಬ್ಯಾಗ್‌, ನೋಟ್‌ ಪುಸ್ತಕ ವಿತರಣೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 13:48 IST
Last Updated 19 ಜೂನ್ 2019, 13:48 IST
ಮಾಗಡಿ ತಾಲ್ಲೂಕಿನ ಕುದೂರಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಲೋಕೇಶ್‌ ತಂಡದವರು ನೋಟ್‌ ಪುಸ್ತಕ ವಿತರಿಸಿದರು.
ಮಾಗಡಿ ತಾಲ್ಲೂಕಿನ ಕುದೂರಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಲೋಕೇಶ್‌ ತಂಡದವರು ನೋಟ್‌ ಪುಸ್ತಕ ವಿತರಿಸಿದರು.   

ಕುದೂರು(ಮಾಗಡಿ): ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡವರ ಮಕ್ಕಳಿಗೆ ನೆರವು ನೀಡುವುದರಿಂದ ಮಾನಸಿಕ ನೆಮ್ಮದಿಯ ಜತೆಗೆ, ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಅನುಕೂಲವಾಗಲಿದೆ ಯುವ ಮುಖಂಡ ಲೋಕೇಶ್‌ ತಿಳಿಸಿದರು.

ಗ್ರಾಮದ ಮಹಾತ್ಮನಗರದ ನಮ್ಮೂರ ಕಿರಿಯ ಶಾಲೆಯ ಮಕ್ಕಳಿಗೆ ಬುಧವಾರ ಉಚಿತ ಬ್ಯಾಗ್‌ ಮತ್ತು ನೋಟ್‌ ಪುಸ್ತಕ ವಿತರಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲೆ ಮಾಡಿದವರಿಗೆ ಮಾತ್ರ ಸರ್ಕಾರಿ ಸವಲತ್ತುಗಳು ಸಿಗುವಂತಾಗಬೇಕು ಎಂದು ತಿಳಿಸಿದರು.

ADVERTISEMENT

ಪಾಳೇಗಾರ ಬಣ್ಣದ ಟಿ.ಹನುಮಂತರಾಯಪ್ಪ ಮಾತನಾಡಿ, ಯುವಕರು ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಮೆಚ್ಚುವ ಸಂಗತಿಯಾಗಿದೆ ಎಂದರು.

ಮುಖ್ಯಶಿಕ್ಷಕ ಮಾಯಣ್ಣ, ಮುಖಂಡ ಕೆ.ಬಿ.ಚಂದ್ರಶೇಖರ್, ಕುಮಾರ್ , ಬಾಬು, ದಯಾನಂದ , ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.