ಕನಕಪುರ: ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ 80ನೇ ವರ್ಷದ ಜಯಂತಿಯನ್ನು ಶನಿವಾರ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಕಚೇರಿಯಲ್ಲಿ ಆಚರಿಸಲಾಯಿತು.
ವೇದಿಕೆ ಪದಾಧಿಕಾರಿಗಳು ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಸತೀಶ್ ಹಾಗೂ ತಾಲ್ಲೂಕು ಅಧ್ಯಕ್ಷ ನಂದೀಶ್ ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂಗಿ ಗಿರಿಯಪ್ಪ,ಟ್ರಸ್ಟ್ ಗೌರವ ಅಧ್ಯಕ್ಷ ಚಿಕ್ಕೆಂಪೇಗೌಡ, ಅಧ್ಯಕ್ಷ ಕಬ್ಬಾಡಿ ಕಾಡೆಗೌಡ, ಶಿವಲಿಂಗಯ್ಯ ಎ.ಬಿ, ಕಾಂತರಾಜು, ರಾಮಯ್ಯ, ಚಿಕ್ಕರಂಗಯ್ಯ, ಸಿ.ಪಿ.ಪುಟ್ಟಸ್ವಾಮಿ, ಸಿ.ಎಸ್. ನಾರಾಯಣ್, ಹೊಂಬಾಳೆ ಗೌಡ, ಸ್ವಾಮಿಗೌಡ, ರಮೇಶ್, ಬೈರೇಗೌಡ, ಬಿಎಸ್ಎನ್ಎಲ್ ನಾಗರಾಜು, ತಟ್ಟೆಕೆರೆ ಮಹದೇವಯ್ಯ, ಶಿವರಾಂ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.