ADVERTISEMENT

ಬೆಂಗಳೂರು–ಮೈಸೂರು ಹೆದ್ದಾರಿ ಟೋಲ್‌ ₹5–₹40ರಷ್ಟು ಏರಿಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 21:06 IST
Last Updated 28 ಮಾರ್ಚ್ 2024, 21:06 IST
<div class="paragraphs"><p>ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇ </p></div>

ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್‌ವೇ

   

ರಾಮನಗರ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬೆಂಗಳೂರು– ಮೈಸೂರು ಹೆದ್ದಾರಿ ಟೋಲ್ ದರವನ್ನು ₹5ರಿಂದ ₹40ರಷ್ಟು ಏರಿಕೆ ಮಾಡಿದೆ. ಪರಿಷ್ಕೃತ ದರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಇದರೊಂದಿಗೆ ಒಂದು ವರ್ಷದ ಅವಧಿಯಲ್ಲಿ ಹೆದ್ದಾರಿ ಟೋಲ್ ಎರಡು ಸಲ ಏರಿಕೆಯಾದಂತಾಗಿದೆ.

ಪ್ರತಿ ವರ್ಷ ಶೇ 22ರಷ್ಟು ದರ ಹೆಚ್ಚಳ ಮಾಡುವ ಪ್ರಾಧಿಕಾರ, ಈ ಸಲ ಪ್ರಯಾಣಿಕರಿಗೆ ಹೆಚ್ಚಿನ ಹೊರೆಯಾಗದಂತೆ ಏರಿಕೆ ಮಾಡಿದೆ.

ADVERTISEMENT

ಕಳೆದ ಏಪ್ರಿಲ್‌ನಲ್ಲೂ ಟೋಲ್ ಹೆಚ್ಚಳ ಮಾಡಿದಾಗ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಆಗ ಪ್ರಾಧಿಕಾರ ತನ್ನ ನಿರ್ಧಾರ ಕೈ ಬಿಟ್ಟಿತ್ತು. ಎರಡು ತಿಂಗಳ ಬಳಿಕ ಜೂನ್‌ನಲ್ಲಿ ಶೇ 22ರಷ್ಟು ಹೆಚ್ಚಳ ಮಾಡಿದ್ದ ಪ್ರಾಧಿಕಾರ, ಅದಾದ 9 ತಿಂಗಳ ಬಳಿಕ ಮತ್ತೆ ಟೋಲ್ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.