
ಚನ್ನಪಟ್ಟಣ: ತಾಲ್ಲೂಕಿನ ಬೇವೂರು ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ 2025-30 ನೇ ಸಾಲಿನ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 11 ಮಂದಿ ನಿರ್ದೇಶಕರು ಗೆಲುವು ಸಾಧಿಸಿದ್ದಾರೆ.
12 ನಿರ್ದೇಶಕರ ಸದಸ್ಯರ ಬಲದ ಸಂಘದಲ್ಲಿ ಪರಿಶಿಷ್ಟ ಪಂಗಡ ವಿಭಾಗದಲ್ಲಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಆ ಸ್ಥಾನಕ್ಕೆ ಚುನಾವಣೆ ನಡೆಯಲಿಲ್ಲ. ಮಹಿಳಾ ಮೀಸಲು ಕ್ಷೇತ್ರದ ಎರಡು ನಿರ್ದೇಶಕರ ಸ್ಥಾನಗಳಿಗೆ ಕಾಂಗ್ರೆಸ್ ಬೆಂಬಲಿತರಾದ ಪುಟ್ಟಲಿಂಗಮ್ಮ, ಪ್ರಭಾವತಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 9 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಿತು.
ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತರು ಸೇರಿ ಒಟ್ಟು 15 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದರು. ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಬೆಂಬಲಿತರು ಜಯ ಸಾಧಿಸಿದರು.
ಸಂಘದ ಸಾಲಗಾರರ ಸಾಮಾನ್ಯ ಕ್ಷೇತ್ರದ 5 ನಿರ್ದೇಶಕರ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾದ ಅಭ್ಯರ್ಥಿಗಳಾದ ಬಿ.ಸಿ. ಯೋಗೀಶ್, ಬಿ. ಕೃಷ್ಣ, ದಯಾನಂದ ಸಾಗರ, ಬಿ.ಎನ್.ಎಸ್. ಕುಮಾರ್, ಬಿ.ಎಸ್. ರಾಜಶೇಖರಸ್ವಾಮಿ, ಸಾಲಗಾರರಲ್ಲದ ಕ್ಷೇತ್ರದಿಂದ ನಾಗಣ್ಣ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿ.ಕೆ. ಅರ್ಜುನ, ಬಿಸಿಎಂ (ಎ) ಕ್ಷೇತ್ರದಿಂದ ಬಿ.ಕೆ. ಪಂಚಲಿಂಗಯ್ಯ, ಬಿಸಿಎಂ (ಬಿ) ಕ್ಷೇತ್ರದಿಂದ ಬಿ.ಆರ್. ನಂದೀಶ್ ಗೆಲುವು ಸಾಧಿಸಿದರು.
ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಅರಳಾಳುಸಂದ್ರ ಶಿವಪ್ಪ, ವಂದಾರಗುಪ್ಪೆ ವಿ.ಬಿ. ಚಂದ್ರು, ಚನ್ನಂಕೇಗೌಡನದೊಡ್ಡಿ ಸಿ.ಪಿ. ನಾಗೇಶ್, ಮುದಗೆರೆ ಜಯಕುಮಾರ್, ಮೈಲನಾಯಕನಹಳ್ಳಿ ಅಜಿತ್, ವಂದಾರಗುಪ್ಪೆ ರಾಜೇಶ್, ಮಧುಸೂದನ್, ಕೆ.ಪಿ. ಪುಟ್ಟಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.