ಕನಕಪುರ:ಅಳ್ಳಿಮರದೊಡ್ಡಿ ಗ್ರಾಮದಲ್ಲಿ ಭಾನುವಾರ ಎರಡು ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸವಾರ ಸಾವನಪ್ಪಿದ್ದು, ಮತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹೇರಿಂದ್ಯಾಪನಹಳ್ಳಿ ಗ್ರಾಮದ ಮಾರಯ್ಯ (65) ಮೃತ ಸವಾರ. ಚಂಬಳಕೆದೊಡ್ಡಿ ಗ್ರಾಮದ ನಾಗರಾಜು ಗಂಭೀರವಾಗಿ ಗಾಯಗೊಂಡು ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೇರಿಂದ್ಯಾಪನಹಳ್ಳಿಯಲ್ಲಿರುವ ಮಗನನ್ನು ನೋಡಲು ಭಾನುವಾರ ಬೆಳಗ್ಗೆ ಅಳಿಯ ಚಂದ್ರು ಜೊತೆ ಬೈಕ್‌ನಲ್ಲಿ ಬಂದಿದ್ದ ಮಾರಯ್ಯ ಬೆಂಗಳೂರಿಗೆ ಮರಳುತ್ತಿದ್ದರು.ಅಳ್ಳಿಮರದೊಡ್ಡಿ ಗ್ರಾಮದಲ್ಲಿ ಎದುರುಗಡೆಯಿಂದ ಬಂದ ನಾಗರಾಜು ಅವರ ಬೈಕ್ ಡಿಕ್ಕಿ ಹೊಡೆದಿದೆ.
ತಲೆಗೆ ತೀವ್ರ ಪೆಟ್ಟಾಗಿ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಾರಯ್ಯನವರನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನಪ್ಪಿದರು.
ಅವರ ಅಳಿಯ ಚಂದ್ರು ಗಾಯಗೊಂಡಿದ್ದು ದಯಾನಂದ ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಡಿಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.