ADVERTISEMENT

ಯಡುವನಹಳ್ಳಿ ಗೇಟ್–ಬನಶಂಕರಿ ಮಧ್ಯೆ ಬಿಎಂಟಿಸಿ ಬಸ್‌

ವೇಗಧೂತ ಮಾದರಿಯ ಸೀಮಿತ ನಿಲುಗಡೆಯ ನಾಲ್ಕು ಬಸ್‌ ಸಂಚಾರಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 8:00 IST
Last Updated 14 ಜನವರಿ 2026, 8:00 IST
ಹಾರೋಹಳ್ಳಿ ತಾಲೂಕಿನ ಜೈನ್ ಕಾಲೇಜು ಬಳಿ ನಾಲ್ಕು ಬಿಎಂಟಿಸಿ ಬಸ್‌ ಸಂಚಾರಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು
ಹಾರೋಹಳ್ಳಿ ತಾಲೂಕಿನ ಜೈನ್ ಕಾಲೇಜು ಬಳಿ ನಾಲ್ಕು ಬಿಎಂಟಿಸಿ ಬಸ್‌ ಸಂಚಾರಕ್ಕೆ ಶಾಸಕ ಇಕ್ಬಾಲ್ ಹುಸೇನ್ ಚಾಲನೆ ನೀಡಿದರು   

ಹಾರೋಹಳ್ಳಿ: ಶಾಲಾ ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಯಡುವನಹಳ್ಳಿ ಗೇಟ್ ಜೈನ್ ಕಾಲೇಜಿನಿಂದ ಬನಶಂಕರಿ ಬಸ್‌ ನಿಲ್ದಾಣಕ್ಕೆ ಆರಂಭಿಸಿರುವ ನಾಲ್ಕು ಬಿಎಂಟಿಸಿ ಬಸ್‌ ಸಂಚಾರಕ್ಕೆ ಶಾಸಕ ಇಕ್ಬಾಲ್ ಹುಸೇನ್ ಮಂಗಳವಾರ ಚಾಲನೆ ನೀಡಿದರು.

ಜನರ ಬಹುದಿನಗಳ ಬೇಡಿಕೆ ಇಂದು ಈಡೇರಿದೆ. ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕರು ಮಂಡಿಸಿದ ಬೇಡಿಕೆ ಮೇಲೆ ಪ್ರತಿ 45 ನಿಮಷಕ್ಕೊಂದು ಬಿಎಂಟಿಸಿ ಬಸ್‌ ಜೈನ್‌ ಕಾಲೇಜು ಮತ್ತು ಬನಶಂಕರಿ ಬಸ್‌ ನಿಲ್ದಾಣದ ನಡುವೆ ಸಂಚರಿಸುತ್ತವೆ ಎಂದು ಶಾಸಕರು ಹೇಳಿದರು.

ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ವೇಗದೂತ ಮಾದರಿಯಲ್ಲಿ ನಾಲ್ಕು ಸೀಮಿತ ನಿಲುಗಡೆಯ ಬಸ್‌ ಸಂಚಾರ ಆರಂಭಿಸಲಾಗಿದೆ. ಬನಶಂಕರಿಯಿಂದ ಹೊರಟು ಕೋಣನಕುಂಟೆ ಕ್ರಾಸ್, ತಲಘಟ್ಟಪುರ, ರೇಷ್ಮೆ ಸಂಸ್ಥೆ, ಕಗ್ಗಲಿಪುರ, ಹಾರೋಹಳ್ಳಿ, ದಯಾನಂದ ಸಾಗರ್ ಆಸ್ಪತ್ರೆಯಿಂದ ಜೈನ್ ಕಾಲೇಜ್‌ವರೆಗೂ ಬಸ್ ಸಂಚಾರ ಇರುತ್ತದೆ ಎಂದು ಬನಶಂಕರಿ ಸಾರಿಗೆ ಡಿಪೊ ವ್ಯವಸ್ಥಾಪಕ ನಾಗೇಶ್ ಹೇಳಿದರು.  

ADVERTISEMENT

ಜಿಲ್ಲಾ ರಾಜ್ಯ ಸಾರಿಗೆ ನಿಯಂತ್ರಕ ಪುರುಷೋತ್ತಮ್, ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಆಶಾ ಲತಾ, ಅಶೋಕ್ ಹೆಚ್.ಎಸ್. ಹರೀಶ್‌ ಕುಮಾರ್, ಕೀರಣಗೆರೆ ಜಗದೀಶ್, ಕೇಬಲ್ ರವಿ, ಸಣ್ಣಪ್ಪ, ಮೋಹನ್‌ಹೊಳ್ಳ, ಲೋಕೇಶ್ (ಸುರೇಶ್), ಜೈನ್ ವಿಶ್ವವಿದ್ಯಾಲಯದ ಮುಖ್ಯಸ್ಥ ಪಾರ್ಶ್ವನಾಥ್, ಡಾ.ವೆಂಕಟೇಶ್ವರನ್, ಡಾ.ಬೆನಕಪ್ರಸಾದ್, ರಾಮಚಂದ್ರ, ಭೈರಲಿಂಗಣ್ಣ, ಅಶೋಕ್(ದಾಸ್), ಹೊನ್ನಯ್ಯ  ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.