ADVERTISEMENT

ಕನಕಪುರ: ಜನರ ಓಡಾಟಕ್ಕೆ ಬ್ರೇಕ್

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 4:52 IST
Last Updated 26 ಏಪ್ರಿಲ್ 2021, 4:52 IST
ಕನಕಪುರ ನಗರ ಭಾನುವಾರ ಸಂಪೂರ್ಣ ಸ್ತಬ್ಧವಾಗಿರುವುದು
ಕನಕಪುರ ನಗರ ಭಾನುವಾರ ಸಂಪೂರ್ಣ ಸ್ತಬ್ಧವಾಗಿರುವುದು   

ಕನಕಪುರ: ವಾರಾಂತ್ಯದ ಲಾಕ್‌ಡೌನ್‌ನ ಎರಡನೇ ದಿನವಾದ ಭಾನುವಾರ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದು, ಸಾರ್ವಜನಿಕರ ಓಡಾಟಕ್ಕೆ ಬ್ರೇಕ್‌‌ ಹಾಕಿದ್ದರು. ಕನಕಪುರ ನಗರ ಸಂಪೂರ್ಣವಾಗಿ ಸ್ತಬ್ಧವಾಗಿತ್ತು.

ಕೊರೊನಾ ಸೋಂಕು ತಡೆಗಾಗಿ ಸರ್ಕಾರ ವಿಧಿಸಿದ್ದ ಲಾಕ್‌ಡೌನ್‌ನಲ್ಲಿ ಪೊಲೀಸರು ಸ್ವಲ್ಪ ಸಡಿಲಿಕೆ ಮಾಡಿದ್ದ ರಿಂದ ಶನಿವಾರ ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್‌ ಆಗಿರಲಿಲ್ಲ. ವಾಹನ ಸಂಚಾರ ಯಥಾಸ್ಥಿತಿಯಲ್ಲಿತ್ತು. ಈ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ಎಚ್ಚೆತ್ತಕೊಂಡ ಪೊಲೀಸರು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಶುರು ಮಾಡಿದ್ದರು. ಅನಗತ್ಯವಾಗಿ ಓಡಾಡುವ ವಾಹನಗಳನ್ನು ವಶಕ್ಕೆ ಪಡೆದ ದಂಡ ವಿಧಿಸಿದರು. ಅಂಗಡಿ ಮುಂಗಟ್ಟುಗಳನ್ನು ಬೆಳಿಗ್ಗೆ 10 ಗಂಟೆ ನಂತರ ಕಡ್ಡಾಯವಾಗಿ ಬಂದ್‌ ಮಾಡಿಸಿದರು. ಇದೆಲ್ಲರ ಪರಿಣಾಮವಾಗಿ ಸಂಜೆವರೆಗೂ ನಗರ ಸ್ತಬ್ಧವಾಗಿತ್ತು. ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್‌ ಯಶಸ್ವಿಯಾಯಿತು.

ವಾರಾಂತ್ಯದ ಲಾಕ್‌ಡೌನ್‌ ಅನ್ನು ನಗರದ ಜತೆಗೆ ಸಾತನೂರು, ಕೋಡಿಹಳ್ಳಿ, ದೊಡ್ಡಾಲಹಳ್ಳಿ, ಹಾರೋಹಳ್ಳಿ, ಮರಳವಾಡಿ ಹೋಬಳಿ ಕೇಂದ್ರದಲ್ಲೂ ಆಯಾ ವ್ಯಾಪ್ತಿಯ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಪೊಲೀಸರ ಭಯಕ್ಕೆ ಹೆದರಿದ ಜನತೆ ಮನೆಯಿಂದ ಹೊರಕ್ಕೆ ಬರದೆ ಮನೆ ಸೇರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.