ADVERTISEMENT

ಹಾರೋಹಳ್ಳಿ: ದ್ಯಾವಸಂದ್ರ ಶಾಲೆಗೆ ಕೆನಡಾ ವಿದ್ಯಾರ್ಥಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 2:29 IST
Last Updated 12 ಜುಲೈ 2025, 2:29 IST
ಹಾರೋಹಳ್ಳಿಯ ದ್ಯಾವಸಂದ್ರ ಸರಕಾರಿ ಶಾಲೆಗೆ ವಿದೇಶಿ ವಿದ್ಯಾರ್ಥಿಗಳು ಭೇಟಿ ನೀಡಿದ್ದರು
ಹಾರೋಹಳ್ಳಿಯ ದ್ಯಾವಸಂದ್ರ ಸರಕಾರಿ ಶಾಲೆಗೆ ವಿದೇಶಿ ವಿದ್ಯಾರ್ಥಿಗಳು ಭೇಟಿ ನೀಡಿದ್ದರು   

ಹಾರೋಹಳ್ಳಿ: ಗ್ರಾಮೀಣ ಮಕ್ಕಳ ಶಿಕ್ಷಣ ಹಾಗೂ ಜೀವನಶೈಲಿ ತಿಳಿಯುವ ಸಲುವಾಗಿ ಕೆನಡಾದ ಮಿಟ್ಟಿ ಶಾಲೆ ವಿದ್ಯಾರ್ಥಿಗಳು ದ್ಯಾವಸಂದ್ರ ಸರ್ಕಾರಿ ಶಾಲೆಗೆ ಭೇಟಿ ನೀಡಿದರು.

ಗ್ರಾಮೀಣ ಮಕ್ಕಳ ಶಿಕ್ಷಣ ಹಾಗೂ ಜೀವನ ಶೈಲಿ ತಿಳಿಯುವ ಸಲುವಾಗಿ ವಿದ್ಯಾನಿಕೇತನ ಎನ್‌ಜಿಒ ಸಂಸ್ಥೆ ನಿರ್ದೇಶಕ ನಾಗರಾಜ್ ಹಾಗೂ ಪ್ರಾಜೆಕ್ಟ್ ಮ್ಯಾನೇಜರ್ ಚೈತ್ರಾ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸಲಾಗಿತ್ತು.

ವಿದೇಶಿ ವಿದ್ಯಾರ್ಥಿಗಳು ಶಾಲೆ ಪರಿಸರ, ಮಕ್ಕಳ ಅಧ್ಯಯನ ಶೈಲಿ ಹಾಗೂ ಗ್ರಾಮೀಣ ಮಕ್ಕಳ ನಿತ್ಯಜೀವನವನ್ನು ನೇರವಾಗಿ ಕಂಡು ಅನುಭವಿಸಿದರು. ಮಕ್ಕಳ ಆತ್ಮೀಯತೆ, ಶ್ರದ್ಧೆ ಹಾಗೂ ಸಂಸ್ಕೃತಿಯ ಪ್ರಭಾವ ವಿದೇಶಿ ವಿದ್ಯಾರ್ಥಿಗಳನ್ನು ಆಕರ್ಷಿಸಿತು.

ADVERTISEMENT

ಪ್ಲಾಂಟಶಾಲಾ ಸಂಸ್ಥೆ ಸ್ಥಾಪಕ ರಂಜಿತ್ ನೇತೃತ್ವದಲ್ಲಿ ಶಾಲಾ ಆವರಣದಲ್ಲಿ ವೃಕ್ಷಾರೋಪಣೆ ಕಾರ್ಯಕ್ರಮ ನಡೆಯಿತು. ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಕ್ಕಳ ಪಾತ್ರ ಮಹತ್ವದ್ದು. ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಪರಿಸರ ನಾಶದಿಂದ ಅನೇಕ ರೀತಿಯ ದುಷ್ಪರಿಣಾಮ ಉಂಟಾಗಲಿದೆ. ಮೊದಲು ಅದನ್ನು  ಕೆಲಸ ಮಾಡಬೇಕು. ಪರಿಸರ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು ಎಂದರು.

ಈ ವೇಳೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಜಾನಪದ ಕಾರ್ಯಕ್ರಮ ನಡೆಸಿಕೊಟ್ಟರು. ಮಕ್ಕಳ ಜಾನಪದ ಕಲೆಗೆ ಮಾರುಹೋದ ವಿದೇಶಿ ವಿದ್ಯಾರ್ಥಿಗಳು ಜಾನಪದ ಹಾಡನ್ನು ಹಾಡುವ ಪ್ರಯತ್ನ ನಡೆಸಿದರು.

ಸರಕಾರಿ ಶಾಲೆಯಲ್ಲಿ ಗಿಡ ನೆಡುವ ಕೆಲಸ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.