ADVERTISEMENT

ರಾಮನಗರ ಕಾರಾಗೃಹದ ಮೇಲೆ ದಾಳಿ: ನಗದು, ಗಾಂಜಾ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 4:24 IST
Last Updated 30 ಮಾರ್ಚ್ 2021, 4:24 IST
   

ರಾಮನಗರ: ಇಲ್ಲಿನ ಜಿಲ್ಲಾ ಕಾರಾಗೃಹದ ಮೇಲೆ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ನಡೆಸಿದ್ದು, ಈ ಸಂದರ್ಭ ಗಾಂಜಾ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ.

ಎಸ್ಪಿ ಗಿರೀಶ್ ನೇತೃತ್ವದಲ್ಲಿ ಐವತ್ತಕ್ಕೂ‌ ಹೆಚ್ಚು ಪೊಲೀಸರ ತಂಡವು ಬೆಳಗ್ಗೆ 6.30ರ ಸುಮಾರಿಗೆ ಕಾರಾಗೃಹದಲ್ಲಿ ತಪಾಸಣೆ ಆರಂಭಿಸಿತು. ಈ ಸಂದರ್ಭ ಮೊಬೈಲ್, ಸಿಮ್ ಕಾರ್ಡ್, ಹಣ, ಬೆಂಕಿಪೊಟ್ಟಣ, ಸಿಗರೇಟ್, ಚಾಕು ಮೊದಲಾದ ವಸ್ತುಗಳು ಪತ್ತೆ ಆದವು. ಅಲ್ಪ‌ ಪ್ರಮಾಣದಲ್ಲಿ ಗಾಂಜಾ ಸಹ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT