ADVERTISEMENT

ಸಾತನೂರಿನಲ್ಲಿ ಪುನುಗಿನ ಬೆಕ್ಕು ಸಾವು

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 13:46 IST
Last Updated 25 ಡಿಸೆಂಬರ್ 2018, 13:46 IST
ಮೃತಪಟ್ಟಿರುವ ಪುನುಗನ ಬೆಕ್ಕು
ಮೃತಪಟ್ಟಿರುವ ಪುನುಗನ ಬೆಕ್ಕು   

ಕನಕಪುರ: ಸಾತನೂರು ಗ್ರಾಮದಲ್ಲಿ ಅತ್ಯಂತ ಅಪರೂಪವಾದ ಹಾಗೂ ಔಷಧೀಯ ಗುಣವನ್ನು ಹೊಂದಿರುವ ಪುನುಗಿನ ಬೆಕ್ಕೊಂದು ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿದೆ.

ಗ್ರಾಮದ ಪ್ರಕಾಶ್‌ ಎಂಬುವರಿಗೆ ಸೇರಿದ ತೋಟದಲ್ಲಿನ ನೀರಿನ ತೊಟ್ಟಿಯಲ್ಲಿ ಅದರ ಮೃತದೇಹ ದೊರೆತಿದೆ. ಅವರು ಸೋಮವಾರ ಬೆಳಿಗ್ಗೆ ತೋಟದ ಕಡೆಗೆ ಹೋದಾಗ ಅದನ್ನು ಗಮನಸಿದ್ದಾರೆ. ಅದು ಇತರ ಬೆಕ್ಕಿನಂತಿರದೆ ವಿಶೇಷವಾಗಿದ್ದುದರಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಅವರು ಹೋಗಿ ನೋಡಿದಾಗ ಅದು ಮಲೆನಾಡು ಪ್ರದೇಶದಲ್ಲಿ ಕಂಡು ಬರುವ ಪುನುಗಿನ ಬೆಕ್ಕೆಂದು ಗೊತ್ತಾಗಿದೆ. ನೀರು ಕುಡಿಯಲು ಹೋಗಿ ನೀರಿನ ತೊಟ್ಟಿಯಲ್ಲಿ ಬಿದ್ದು ಸಾವನ್ನಪ್ಪಿರಬಹುದೆಂದು ಶಂಕಿಸಿದ್ದಾರೆ.

ADVERTISEMENT

ಸಾತನೂರು ಪ್ರಾದೇಶಿಕ ಅರಣ್ಯ ವಲಯ ಕಚೇರಿಗೆ ಅದನ್ನು ತಂದು ಪಶು ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್‌ ಅವರಿಂದ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ವಲಯ ಅರಣ್ಯಾಧಿಕಾರಿ ದಿನೇಶ್‌, ಉಪ ವಲಯ ಅರಣ್ಯಾಧಿಕಾರಿ ರಾಜು, ಅರಣ್ಯ ರಕ್ಷಕ ತಿಪ್ಪೇಸ್ವಾಮಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.