ADVERTISEMENT

ಚನ್ನಪಟ್ಟಣ: ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಆಯ್ಕೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 3:03 IST
Last Updated 30 ಜನವರಿ 2026, 3:03 IST
ಡಿಎಂಕೆ ಕುಮಾರ್
ಡಿಎಂಕೆ ಕುಮಾರ್   

ಚನ್ನಪಟ್ಟಣ: ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ (ಪಿಎಲ್‌ಡಿ ಬ್ಯಾಂಕ್) ಅಧ್ಯಕ್ಷರಾಗಿ ಇಗ್ಗಲೂರು ಗ್ರಾಮದ ಡಿಎಂಕೆ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆ ಸಿಡಿಒ ಅಂಜನಮೂರ್ತಿ ಕಾರ್ಯನಿರ್ವಹಿಸಿದರು. ಬ್ಯಾಂಕ್‌ ವ್ಯವಸ್ಥಾಪಕ ಎಚ್.ಎಂ. ರಾಮು ಹಾಗೂ ಸಿಬ್ಬಂದಿ ಸಹಕಾರ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್, ಬ್ಯಾಂಕ್‌ನ ಎಲ್ಲ ನಿರ್ದೇಶಕರ ಸಹಕಾರ ಪಡೆದು ಬ್ಯಾಂಕ್‌ ಅಭಿವೃದ್ಧಿ ಹಾಗೂ ರೈತರ ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.

ADVERTISEMENT

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಯಮುತ್ತು, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆನಂದಸ್ವಾಮಿ, ಆಡಳಿತ ಮಂಡಳಿ ಉಪಾಧ್ಯಕ್ಷೆ ಪ್ರಮೀಳಾ, ನಿರ್ದೇಶಕರಾದ ಗೋವಿಂದಹಳ್ಳಿ ನಾಗರಾಜು, ಮಾಗನೂರು ಗಂಗರಾಜು, ಬೈರನರಸಿಂಹಯ್ಯ, ದೊಡ್ಡ ರೇವಣ್ಣ, ಈಶ್ವರ, ವೆಂಕಟೇಶ್, ಮೋಹನ್, ಜಯಮ್ಮ, ಮದ್ದೂರಯ್ಯ, ಹನುಮಂತಯ್ಯ, ಸುನೀಲ್, ಬಾಬುರಾವ್ ಸಾಳಂಕೆ, ಸಿದ್ದರಾಜು, ಜೆಡಿಎಸ್ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.