ADVERTISEMENT

ಸಾವನದುರ್ಗದಲ್ಲಿ ಸ್ವಚ್ಛತಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2024, 4:20 IST
Last Updated 13 ಫೆಬ್ರುವರಿ 2024, 4:20 IST
ಮಾಗಡಿ ಸಾವನದುರ್ಗದ ತಪ್ಪಲಿನಲ್ಲಿ ಸೋಮವಾರ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದ ಧನಂಜಯ ಮತ್ತು ತಂಡ
ಮಾಗಡಿ ಸಾವನದುರ್ಗದ ತಪ್ಪಲಿನಲ್ಲಿ ಸೋಮವಾರ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದ ಧನಂಜಯ ಮತ್ತು ತಂಡ   

ಮಾಗಡಿ: ತಾಲ್ಲೂಕಿನ ಸಾವನದುರ್ಗ ಬೆಟ್ಟದ ತಪ್ಪಲಿನಲ್ಲಿ ಶ್ರೀರಂಗ ಪ್ರಾಣಿಪಕ್ಷಿ ಸೇವಾಶ್ರಮದ ವತಿಯಿಂದ ಸೋಮವಾರ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಸೇವಾಶ್ರಮದ ಮುಖ್ಯಸ್ಥ ಜ್ಯೋತಿನಗರ ಧನಂಜಯ ಮಾತನಾಡಿ, ಸಾವನದುರ್ಗದ ದೇವಾಲಯಗಳಿಗೆ ಆಗಮಿಸುವ ಭಕ್ತರು ಮತ್ತು ರಜಾ ದಿನಗಳಲ್ಲಿ ಮೋಜಿಗಾಗಿ ಆಗಮಿಸುವವರು ಅರಣ್ಯದ ಅಂಚಿನಲ್ಲಿ ಪ್ಲಾಸ್ಟಿಕ್‌ ಲೋಟ, ಚೀಲ, ಇತರೆ ಪರಿಕರಗಳನ್ನು ಎಸೆದು ಪರಿಸರ ನಾಶ ಮಾಡುವುದನ್ನು ಜಿಲ್ಲಾಡಳಿತ ತಡೆಯಬೇಕು ಎಂದರು.

ಸಾವನದುರ್ಗ ಬೆಟ್ಟದ ತಪ್ಪಲು ಮತ್ತು ಕೆಂಪೇಗೌಡ ವನಧಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದೇವೆ. ಸಾಹಸಿಗ ಚಾರಣರು ಮಾತ್ರವಲ್ಲದೆ ಸಾರ್ವಜನಿಕರು ವಿಹಾರಕ್ಕೆ ಪ್ರತಿನಿತ್ಯ ಬೆಟ್ಟಕ್ಕೆ ಬಂದು ಪರಿಸರವನ್ನು ಹಾಳುಮಾಡುತ್ತಿದ್ದರೂ ಅರಣ್ಯ ಮತ್ತು ಪೊಲೀಸ್ ಇಲಾಖೆ ಇತ್ತ ಸರಿಯಾದ ರೀತಿಯಲ್ಲಿ ಗಮನ ಹರಿಸದೆ ಎಲ್ಲವೂ ಕಲುಷಿತಗೊಂಡಿದೆ ಎಂದು ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.