ADVERTISEMENT

ಸಿ.ಎಂ ಬದಲಾವಣೆ: ಹೈಕಮಾಂಡ್‌ ತೀರ್ಮಾನ– ಶಾಸಕ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 2:53 IST
Last Updated 4 ಅಕ್ಟೋಬರ್ 2025, 2:53 IST
ಮಾಗಡಿ ಜೂನಿಯರ್ ಕಾಲೇಜು ಮೈದಾನದಲ್ಲಿ ₹17ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಕುವೆಂಪು ರಂಗ ಮಂದಿರ ನಿರ್ಮಾಣವನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಪರಿಶೀಲಿಸಿದರು
ಮಾಗಡಿ ಜೂನಿಯರ್ ಕಾಲೇಜು ಮೈದಾನದಲ್ಲಿ ₹17ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿರುವ ಕುವೆಂಪು ರಂಗ ಮಂದಿರ ನಿರ್ಮಾಣವನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಪರಿಶೀಲಿಸಿದರು   

ಮಾಗಡಿ: ಪಟ್ಟಣದ ಎನ್ಇಎಸ್ ಬಡವಾಣೆ ಜೂನಿಯರ್ ಕಾಲೇಜು ಮೈದಾನದಲ್ಲಿ ₹17ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕುವೆಂಪು ರಂಗಮಂದಿರ ನಿರ್ಮಾಣವಾಗಲಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ತಿಳಿಸಿದರು.

ಶುಕ್ರವಾರ ಕಾಮಗಾರಿ ಪರಿಶೀಲಿಸಿದ ಅವರು, ಇಲ್ಲಿ 1200 ಆಸನಗಳ ಸಾಮರ್ಥ್ಯದ ದೊಡ್ಡ ಆಡಿಟೋರಿಯಂ ನಿರ್ಮಾಣವಾಗಲಿದೆ ಹೇಳಿದರು.

ಶಾಲಾ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಿಗೆ ಉಪಯೋಗವಾಗಲಿದೆ. ಜೂನಿಯರ್ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳಿಗೂ ಇದು ಉಪಯುಕ್ತವಾಗಲಿದೆ. ಇದೇ ಸ್ಥಳದಲ್ಲಿ ₹6.5ಕೋಟಿ ವೆಚ್ಚದಲ್ಲಿ ಬೆಂಗಳೂರಿನ ವಿಜಯನಗರ ಮಾದರಿಯ ಸ್ಟೇಡಿಯಂ ನಿರ್ಮಾಣವೂ ಹಂತ ಹಂತವಾಗಿ ನಡೆಯುತ್ತಿದೆ ಎಂದರು.

ADVERTISEMENT

ಎನ್ಇಎಸ್ ವೃತ್ತ ಅಭಿವೃದ್ಧಿ ಮಾಡುವ ಹಿನ್ನಲೆಯಲ್ಲಿ ಗಾಂಧಿ ಪುತ್ಥಳಿ ತೆರವುಗೊಳಿಸಿ ದೊಡ್ಡದಾದ ಗಾಂಧಿ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ. ದ್ವೇಷದ ರಾಜಕಾರಣ ಮಾಡುತ್ತಿಲ್ಲ. ಕೆಲವು ಕಾರಣಾಂತರದಿಂದ ಕಾಮಗಾರಿ ವಿಳಂಬ ಆಗಿರುವುದರಿಂದ ಪ್ರತಿಮೆ ನಿರ್ಮಾಣ ತಡವಾಗಿದೆ ಎಂದರು.

ಮುಖ್ಯಮಂತ್ರಿ ಬದಲಾವಣೆ ಮತ್ತು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರಶ್ನೆಗೆ, ‘ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಮಾಡಲಿದೆ. ನಾನು ಕ್ಷೇತ್ರದ ಅಭಿವೃದ್ಧಿ ಕೆಲಸದ ಮೇಲೆ ಗಮನ ಹರಿಸಿದ್ದೇನೆ’ ಎಂದರು.

ಕಾರ್ಯಕ್ರಮದ ನಂತರ ಶಾಸಕರು ಬಸ್ ನಿಲ್ದಾಣ ಮತ್ತು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸೌಲಭ್ಯ ಪರಿಶೀಲಿಸಿದರು.

ಇದೇ ವೇಳೆ ಪುರಸಭಾ ಸದಸ್ಯರು, ಕಾಂಗ್ರೆಸ್ ಮುಖಂಡರು, ಅಧಿಕಾರಿಗಳು ಭಾಗವಹಿಸಿದ್ದರು.

ಮಾಗಡಿ: ಪಟ್ಟಣದ ಎನ್ಇಎಸ್ ಬಡವಾಣೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ₹ 17 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕುವೆಂಪು ರಂಗಮಂದಿರ (ಆಡಿಟೋರಿಯಂ) ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಪಟ್ಟಣದ ಜೂನಿಯರ್ ಕಾಲೇಜು ಮೈದಾನಕ್ಕೆ ಶುಕ್ರವಾರ ಭೇಟಿ ನೀಡಿ ಕಾಮಗಾರಿ ಬಗ್ಗೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ದೊಡ್ಡ ಆಡಿಟೋರಿಯಂ ನಿರ್ಮಾಣವಾದರೆ ಪಟ್ಟಣದ ಎಲ್ಲಾ ಶಾಲೆಯ ವಾರ್ಷಿಕೋತ್ಸವಗಳು ಈ ಆಡಿಟೋರಿಯಂನಲ್ಲಿ ನಡೆಸಲು ಅವಕಾಶ ಸಿಗಲಿದೆ ಆಡಿಟೋರಿಯಂನ ಒಳಗಡೆ 800 ಆಸನ ಹಾಗೂ ಮೊದಲ ಮಹಡಿಯಲ್ಲಿ 400 ಆಸನಗಳ ಒಟ್ಟು 1200 ಸಾವಿರದ ದೊಡ್ಡ ವೇದಿಕೆ ನಿರ್ಮಾಣವಾಗಲಿದ್ದು ಖಾಸಗಿಯವರಿಗೂ ಕೂಡ ರಜಾ ಸಮಯದಲ್ಲಿ ಪೌರಾಣಿಕ ನಾಟಕ ಹಾಗೂ ಇತರೆ ಕಾರ್ಯಕ್ರಮಗಳಿಗೆ ಉಪಯೋಗಿಸಿಕೊಳ್ಳಲು ಅವಕಾಶ ಕೊಡಲಾಗುತ್ತದೆ ಇದರ ನಿರ್ವಹಣೆಯನ್ನು ಸಹಕಾರಿಯಾಗಲಿದೆ ಜತೆಗೆ ಜೂನಿಯರ್ ಕಾಲೇಜನ್ನು ಕೆಪಿಎಸ್ ಶಾಲೆಯಾಗಿ ಪರಿವರ್ತನೆ ಮಾಡುತ್ತಿದ್ದು ಅನುದಾನ ಬಿಡುಗಡೆ ಮಾಡುವುದಾಗಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಈಗಾಗಲೇ ತಿಳಿಸಿದ್ದು 1 ರಿಂದ 12 ನೇ ತರಗತಿ ವರೆಗೂ ಕನ್ನಡ ಮತ್ತು ಇಂಗ್ಲೀಷ್ ಮಾಧ್ಯಮ ಆರಂಭಿಸುವುದರಿಂದ ಹೆಚ್ಚಿನ ಮಕ್ಕಳು ಇಲ್ಲಿ ದಾಖಲಾಗುತ್ತಾರೆ 2 ರಿಂದ 3 ಸಾವಿರ ವಿದ್ಯಾರ್ಥಿಗಳು ದಾಖಲಾದರೆ ಅವರಿಗೆ ಆಡಿಟೋರಿಯಂ ಅತಿ ಮುಖ್ಯವಾಗಿ ಬೇಕಾಗಿರುತ್ತದೆ ಈ ದೂರದೃಷ್ಟಿಯಿಂದ ದೊಡ್ಡದಾದ ಆಡಿಟೋರಿಯಂ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ವಿಜಯನಗರ ಮಾದರಿಯಲ್ಲಿ ಸ್ಟೇಡಿಯಂ ನಿರ್ಮಾಣ : ಬೆಂಗಳೂರಿನ ವಿಜಯನಗರ ಮಾದರಿಯಲ್ಲಿ ಜೂನಿಯರ್ ಕಾಲೇಜು ಬಳಿ ₹6.5 ಕೋಟಿ ವೆಚ್ಚದಲ್ಲಿ ಸ್ಟೇಡಿಯಂ ನಿರ್ಮಾಣ ಮಾಡಲಾಗುತ್ತಿದ್ದು ಕ್ರೀಡಾಪಟುಗಳಿಗೆ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸ್ಟೇಡಿಯಂ ನಿರ್ಮಾಣ ಮಾಡುತ್ತಿದ್ದು ಇನ್ನೂ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಮುಖ್ಯಮಂತ್ರಿ ವಿಶೇಷ ಅನುದಾನ ತಂದಿದ್ದು ಇಲ್ಲಿ ಸುಸಜ್ಜಿತ ಕಾಲೇಜು ಕ್ಯಾಂಪಸ್ ಮಾಡುವ ನಿಟ್ಟಿನಲ್ಲಿ ಕಾಮಗಾರಿ ಮಾಡಲಾಗುತ್ತಿದೆ ದಾನಿಗಳ ನೆರವು ಪಡೆದು ಮೂರು ಕೋಟಿ ಹಣವನ್ನು ಫಿಕ್ಸೆಡ್ ಮಾಡಿಸಿ ಅದರಿಂದ ಬರುವ ಬಡ್ಡಿ ಹಣದಲ್ಲಿ ಆಡಿಟೋರಿಯಂ ಹಾಗೂ ಸ್ಟೇಡಿಯಂ ನಿರ್ವಹಣೆ ಮಾಡಲು ಚಿಂತನೆ ಮಾಡುತ್ತಿರುವುದಾಗಿ ಬಾಲಕೃಷ್ಣ ಹೇಳಿದರು.

ದ್ವೇಷದ ರಾಜಕಾರಣ ಮಾಡುತ್ತಿಲ್ಲ : ಎನ್ಇಎಸ್ ವೃತ್ತ ಅಭಿವೃದ್ಧಿ ಮಾಡುವ ಹಿನ್ನಲೆಯಲ್ಲಿ ಗಾಂಧಿ ಪುತ್ಥಳಿ ತೆರವುಗೊಳಿಸಿ ದೊಡ್ಡದಾದ ಗಾಂಧಿ ಪ್ರತಿಮೆ ನಿರ್ಮಾಣ ಮಾಡಲಾಗುತ್ತದೆ ದ್ವೇಷದ ರಾಜಕಾರಣ ಮಾಡುತ್ತಿಲ್ಲ ಗುತ್ತಿಗೆದಾರನಿಗೆ ಕೆಲವು ಕಾರಣಾಂತರದಿಂದ ಕಾಮಗಾರಿ ವಿಳಂಬ ಆಗಿರುವುದರಿಂದ ಪ್ರತಿಮೆ ನಿರ್ಮಾಣ ತಡವಾಗಿದೆ ಇನ್ನು ಕೆಲವೇ ದಿನಗಳಲ್ಲಿ ಗಾಂಧಿ ಪ್ರತಿಮೆ ನಿರ್ಮಾಣ ಮಾಡಿ ಜೆಡಿಎಸ್ ನವರಿಂದಲೇ ಉದ್ಘಾಟನೆ ಮಾಡಿಸಿ ಸನ್ಮಾನ ಮಾಡಲಾಗುತ್ತದೆ ಗಾಂಧಿ ಕೊಂದವರು ಆರ್ ಎಸ್ ಎಸ್ ನವರ 100 ವರ್ಷದ ಸಂಭ್ರಮದ ಪಥಸಂಚಲನ ಗಣಾವೇಶದಲ್ಲಿ ಮಾಜಿ ಶಾಸಕ ಎ.ಮಂಜುನಾಥ್ ಭಾಗವಹಿಸಿದ್ದು ಈಗ ಗಾಂಧಿ ಜಯಂತಿಯನ್ನು ಅವರು ಆಚರಿಸುತ್ತಿರುವುದು ವಿಪರ್ಯಾಸ ಎಂದು ಬಾಲಕೃಷ್ಣ ಮಾಜಿ ಶಾಸಕರ ನಡವಳಿಕೆ ವಿರುದ್ಧ ವ್ಯಂಗ್ಯವಾಡಿದರು.

ಸಿಎಂ ಬದಲಾವಣೆ ವಿಚಾರವಾಗಿ ನಾನು ಮಾತನಾಡುವಷ್ಟು ದೊಡ್ಡವನಲ್ಲ ನಾನು ಕಾಂಗ್ರೆಸ್ ಪಕ್ಷದಲ್ಲಿ ಜೂನಿಯರ್ ಶಾಸಕ ಜೆಡಿಎಸ್ ನಲ್ಲಿ ಸೀನಿಯರ್ ಶಾಸಕನಾಗಿ ಕೆಲಸ ಮಾಡಿದ್ದೇನೆ ಈ ವಿಚಾರವಾಗಿ ಹೈಕಮಾಂಡ್ ತೀರ್ಮಾನ ಮಾಡಲಿದೆ ನಾನು ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದು ಪಕ್ಷ ಗುರುತಿಸಿ ನನಗೆ ಅವಕಾಶ ಕೊಡಬಹುದು ಸಿಎಂ ಬದಲಾವಣೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನು ಹೇಳುವಷ್ಟು ದೊಡ್ಡವನಲ್ಲ ಈ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದ್ದಾರೆ ಎಂದು ಬಾಲಕೃಷ್ಣ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದರು.

ಶುಕ್ರವಾರ ಬೆಳಗ್ಗೆ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಹಾಗೂ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ಕುಂದು ಕೊರತೆ ಬಗ್ಗೆ ಶಾಸಕರು ಪರಿಶೀಲನೆ ನಡೆಸಿದರು.

ಇದೇ ವೇಳೆ ಪುರಸಭಾ ಸದಸ್ಯರು ಕಾಂಗ್ರೆಸ್ ಮುಖಂಡರು ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.