
ಪ್ರಜಾವಾಣಿ ವಾರ್ತೆ
ಕುದೂರು: ಮುಂದೆ ಬರುತ್ತಿದ್ದ ವಾಹನಕ್ಕೆ ಜಾಗ ಕೊಡಲು ಹೋಗಿ ಕೆರೆ ಏರಿ ಹಳ್ಳಕ್ಕೆ ಕಾಲೇಜು ಬಸ್‌ಯೊಂದು ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ.
ತಾಲ್ಲೂಕಿನ ಕುದೂರು ಹೋಬಳಿ ಬಿಸ್ಕೂರು ಸಮೀಪ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದ್ದು,ಬಸ್ ಖಾಲಿ ಇದ್ದ ಹಿನ್ನೆಲೆಯಲ್ಲಿ ಅನಾಹುತ ತಪ್ಪಿದೆ.
ನೆಲಮಂಗಲದ ದಾಬಸ್ ಪೇಟೆ ಹೊಯ್ಸಳ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಕರೆತರಲು ಹೋಗುತ್ತಿದ್ದಾಗ ಈ ಅವಘಡ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.