ADVERTISEMENT

ರಾಮನಗರ ಜಿಲ್ಲೆಯಾದ್ಯಂತ ಮಳೆ ಮುಂದುವರಿಕೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2020, 17:31 IST
Last Updated 26 ಜೂನ್ 2020, 17:31 IST
ರಾಮನಗರ ತಾಲ್ಲೂಕಿನ ಪಾಲಭೋವಿದೊಡ್ಡಿ ಸಮೀಪ ಜಲಾವೃತಗೊಂಡ ಬೆಳೆ
ರಾಮನಗರ ತಾಲ್ಲೂಕಿನ ಪಾಲಭೋವಿದೊಡ್ಡಿ ಸಮೀಪ ಜಲಾವೃತಗೊಂಡ ಬೆಳೆ   

ರಾಮನಗರ: ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಗುರುವಾರ ರಾತ್ರಿಯೂ ಉತ್ತಮ ವರ್ಷಧಾರೆಯಾಗಿದೆ.

ರಾಮನಗರದಲ್ಲಿ ಕಳೆದ ಮೂರು ದಿನಗಳಲ್ಲಿ ನೂರು ಮಿಲಿಮೀಟರ್‌ಗೂ ಹೆಚ್ಚು ಮಳೆ ಸುರಿದಿದೆ. ಹೊಲಗಳಲ್ಲಿ ನೀರು ನಿಂತಿದ್ದು, ಮಣ್ಣು ಹಸಿಯಾದ ಕಾರಣ ರೈತರು ಉಳುಮೆ ಮಾಡಿಲ್ಲ. ಈಗಾಗಲೇ ಬೆಳೆದಿರುವ ಬೆಳೆಗಳೂ ಜಲಾವೃತಗೊಂಡಿವೆ. ತಗ್ಗು ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿದೆ. ಗುರುವಾರ ರಾತ್ರಿ ಕನಕಪುರ ತಾಲ್ಲೂಕಿನಲ್ಲಿ ಸರಾಸರಿ 27 ಮಿ.ಮೀ. ಮಾಗಡಿಯಲ್ಲಿ 40 ಮಿ.ಮೀ, ಚನ್ನಪಟ್ಟಣದಲ್ಲಿ 17 ಹಾಗೂ ರಾಮನಗರದಲ್ಲಿ 46 ಮಿ.ಮೀ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT