ಚನ್ನಪಟ್ಟಣ: ಶಾಸಕ ಸಿ.ಪಿ.ಯೋಗೇಶ್ವರ್ ಮಂಗಳವಾರ ತಾಲ್ಲೂಕಿನ ಮಾಕಳಿ, ದಶವಾರ, ನಾಗವಾರ, ಬೇವೂರು ಗ್ರಾ.ಪಂ.ವ್ಯಾಪ್ತಿಗಳಲ್ಲಿ ಇ–ಸ್ವತ್ತು ಆಂದೋಲನ ಹಾಗೂ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಸಭೆ ಆಯೋಜಿಸಿದ್ದರು.
ಗ್ರಾ.ಪಂ.ವ್ಯಾಪ್ತಿಗಳಲ್ಲಿ ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ಕಾಡು ಪ್ರಾಣಿಗಳ ಸಮಸ್ಯೆ, ರಸ್ತೆ, ಚರಂಡಿ ಸಮಸ್ಯೆ, ಶಾಲೆಗಳ ಕಟ್ಟಡ, ಶಿಕ್ಷಕರ ಕೊರತೆ, ಅಂಗನವಾಡಿ ಸೌಲಭ್ಯ ಸಮಸ್ಯೆ, ತೋಟಗಾರಿಕೆ, ಕೃಷಿ, ನೀರಾವರಿ ಇಲಾಖೆ ಸಮಸ್ಯೆಯನ್ನು ಶಾಸಕರ ಜತೆ ಹಂಚಿಕೊಂಡರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ ಎಂದು ಆರೋಪಗಳು ಬಂದವು. ಇದಕ್ಕೆ ಶಾಸಕ ಯೋಗೇಶ್ವರ್ ಕುಪಿತರಾಗಿ, ಸ್ಥಳದಲ್ಲಿ ಇದ್ದ ಗ್ರಾ.ಪಂ. ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದರು.
ತಾ.ಪಂ ಇ.ಒ ಸಂದೀಪ್, ಕಾವೇರಿ ನೀರಾವರಿ ನಿಗಮದ ಎಇಇ ಸುರೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಅಪರ್ಣಾ, ಸಿ.ಡಿ.ಪಿ.ಒ ಪ್ರಮೀಳಾ, ಜಲಜೀವನ್ ಮಿಷನ್ ಎಂಜಿನಿಯರ್ ಮಧು, ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.