ADVERTISEMENT

ಸಿಲಿಂಡರ್ ಅಕ್ರಮ ರೀ ಫಿಲ್ಲಿಂಗ್: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 14:10 IST
Last Updated 26 ಫೆಬ್ರುವರಿ 2020, 14:10 IST
ಚನ್ನಪಟ್ಟಣದ ಎಲೇಕೇರಿಯಲ್ಲಿ ವಶಪಡಿಸಿಕೊಂಡ ಸಿಲಿಂಡರ್‌ನೊಂದಿಗೆ ಬಂಧಿತ ಆರೋಪಿ
ಚನ್ನಪಟ್ಟಣದ ಎಲೇಕೇರಿಯಲ್ಲಿ ವಶಪಡಿಸಿಕೊಂಡ ಸಿಲಿಂಡರ್‌ನೊಂದಿಗೆ ಬಂಧಿತ ಆರೋಪಿ   

ಚನ್ನಪಟ್ಟಣ: ಪಟ್ಟಣದ ಎಲೇಕೇರಿಯಲ್ಲಿ ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದ ಸ್ಥಳಕ್ಕೆತಹಶೀಲ್ದಾರ್ ಸುದರ್ಶನ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.ರೀ ಫಿಲ್ಲಿಂಗ್‌ಗೆ ಬಳಸುತ್ತಿದ್ದ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಸೋಮಶೇಖರ್ ಬಂಧಿತ. ಅಡುಗೆ ಅನಿಲ ಸಿಲಿಂಡರ್‌ಗಳನ್ನು ಕಾಳಸಂತೆಯಲ್ಲಿ ಕೊಂಡು ಬೇರೆ ಸಿಲಿಂಡರ್‌ಗಳಿಗೆಅಕ್ರಮವಾಗಿ ರೀ ಫಿಲ್ಲಿಂಗ್‌ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಯಿತು ಎಂದು ಪೊಲೀಸರು ತಿಳಿದ್ದಾರೆ.

ಬಂಧಿತ ಮಾಜಿ ನಗರಸಭಾ ಸದಸ್ಯೆಯೊಬ್ಬರ ಪತಿ ಎಂದು ತಿಳಿದುಬಂದಿದೆ. ಇವರು ಕೆಲವು ತಿಂಗಳುಗಳಿಂದ ಎಲೇಕೇರಿಯ ಚಾಮುಂಡೇಶ್ವರಿ ದೇವಾಲಯದ ಬಳಿ ಅಕ್ರಮ ಗ್ಯಾಸ್ ರೀ ಫಿಲ್ಲಿಂಗ್ ಮಾಡುತ್ತಿದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.

ADVERTISEMENT

‘ದಾಳಿಯ ವೇಳೆ ಮೂರು ಸಿಲಿಂಡರ್ ಹಾಗೂ ರೀ ಫಿಲ್ಲಿಂಗ್ ಗೆ ಬಳಸುವ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ’ ಎಂದು ತಹಶೀಲ್ದಾರ್ ಸುದರ್ಶನ್‌ ತಿಳಿಸಿದ್ದಾರೆ.

ಆಹಾರ ನಿರೀಕ್ಷಕರಾದ ಶಾಂತಕುಮಾರಿ, ಕಸಬಾ ಹೋಬಳಿಯ ಕಂದಾಯ ನಿರೀಕ್ಷಕ ಕಾಂತರಾಜು, ‌ಸಬ್ಇನ್‌ಸ್ಪೆಕ್ಟರ್ ಶಾಂತಪ್ಪ, ತಾಲ್ಲೂಕು ಕಚೇರಿ ಸಿಬ್ಬಂದಿ ನಾಗರಾಜು, ಪ್ರತಾಪ್, ಶಿವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.