ಮಾಗಡಿ: ತಟವಾಳ್ ದಲಿತ ಕಾಲೊನಿಯಲ್ಲಿ ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ ಎಂದು ಕಾಲೊನಿ ನಿವಾಸಿಗಳು ತಿಳಿಸಿದ್ದು, ಕೂಡಲೆ ಕುಡಿಯುವ ನೀರು ಒದಗಿಸುವಂತೆ ಮನವಿ ಮಾಡಿದ್ದಾರೆ.
ಕಾಲೊನಿಯಲ್ಲಿ 89 ಮನೆಗಳಿವೆ. ಪುರಾತನ ಕಾಲದಿಂದಲೂ ಕಲ್ಲುಬಾವಿಯಿಂದ ನೀರು ಸಂಗ್ರಹಿಸಿ ಬಳಸುತ್ತಿದ್ದೆವು. ಈಗ ಬೇಸಿಗೆಯಲ್ಲಿ ಕಲ್ಲುಬಾವಿಯಲ್ಲೂ ನೀರಿಲ್ಲದೆ ಕೊರತೆ ಎದುರಾಗಿದೆ ಎಂದು ಮಹಿಳೆಯರು ತಿಳಿಸಿದರು.
ಕಾಲೊನಿಯಲ್ಲಿ ಅರ್ಧ ಸಿಸಿ ರಸ್ತೆ ಮಾಡಿದ್ದಾರೆ. ಇನ್ನುಳಿದಂತೆ ರಸ್ತೆ ದುರಸ್ತಿಯಾಗಿಲ್ಲ. ರಸ್ತೆ ಬದಿ ವಿಷಜಂತುಗಳು ಓಡಾಡುತ್ತಿವೆ. ರಾತ್ರಿ ವೇಳೆ ಬೀದಿ ದೀಪಗಳಿರುವುದಿಲ್ಲ. ಮೂಲಸವಲತ್ತುಗಳನ್ನು ಒದಗಿಸಬೇಕು ಎಂದು ಕಾಲೊನಿ ನಿವಾಸಿಗಳು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.